ಶಾರುಕ್-ಆಮಿರ್ ಭದ್ರತೆ ಕಡಿತ

ಮುಂಬೈ, ಜ.8: ಬೆದರಿಕೆ ಅಂದಾಜಿನ ಮರು ಪರಿಶೀಲನೆಯ ಬಳಿಕ ಮುಂಬೈ ಪೊಲೀಸ್, ನಟರಾದ ಆಮಿರ್ ಖಾನ್ ಹಾಗೂ ಶಾರುಖ್ ಖಾನ್‌ರಿಗೆ ನೀಡಲಾಗಿದ್ದ ಭದ್ರತೆಯನ್ನು ಕಡಿತಗೊಳಿಸಿದ್ದು, ಬಾಲಿವುಡ್‌ನ ಇತರ ಕೆಲವು ಗಣ್ಯರ ಭದ್ರತೆಯನ್ನು ಹಿಂಪಡೆದಿದೆ.
ಆದಾಗ್ಯೂ, ಪೊಲೀಸರು ಅಕ್ಷಯ್ ಕುಮಾರ್, ಮಹೇಶ್ ಹಾಗೂ ಮುಕೇಶ್ ಭಟ್, ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್ ಹಾಗೂ ಲತಾ ಮಂಗೇಶ್ಕರ್‌ರಿಗೆ ದಿನದ 24, ಗಂಟೆಯೂ ಭದ್ರತೆಯನ್ನು ಮುಂದುವರಿಸಲಿದ್ದಾರೆಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ಆಮಿರ್ ಹಾಗೂ ಶಾರುಕ್ ‘ಹೆಚ್ಚುತ್ತಿರುವ ಅಸಹಿಷ್ಣುತೆಯ’ ವಿರುದ್ಧ ಮಾತನಾಡಿದ್ದ ಕಾರಣ ಕೆಲವು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಆಕ್ರೋಶಿತ ಪ್ರತಿಕ್ರಿಯೆ ನೀಡಿದ್ದ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿತ್ತು.
Next Story





