ಸಮ-ಬೆಸ ನಿಯಮದ ಭವಿಷ್ಯ ಹೈಕೋರ್ಟ್‌ನಿಂದ ಜ.11ಕ್ಕೆ ನಿರ್ಧಾರ
ಹೊಸದಿಲ್ಲಿ, ಜ.8: ಸಮ-ಬೆಸ ವಾಹನ ನಿಯಮದ ಭವಿಷ್ಯವನ್ನು ದಿಲ್ಲಿ ಹೈಕೋರ್ಟ್ ಜ.11ರಂದು ನಿರ್ಧರಿಸಲಿದೆ. ಎಎಪಿ ಸರಕಾರದ ಮಹತ್ತ್ವಾಕಾಂಕ್ಷಿ ಯೋಜನೆಯನ್ನು ಪ್ರಶ್ನಿಸಿದ್ದ ಅನೇಕ ಮನವಿಗಳ ಕುರಿತು ಆದೇಶವನ್ನು ಅದಿಂದು ಕಾದಿರಿಸಿದೆ.
ಜ.1ರಂದು ನಿಯಮವನ್ನು ಜಾರಿಗೊಳಿಸಿ ಬಳಿಕ, ರಾಷ್ಟ್ರ ರಾಜಧಾನಿವಲಯದಾದ್ಯಂತ ಪಾರ್ಟಿಕ್ಯುಲೇಟ್ ಮ್ಯಾಟರ್‌ನ ಮಾಲಿನ್ಯ ಮಟ್ಟ ಇಳಿಕೆಯ ಪ್ರವೃತ್ತಿ ತೋರಿಸಿದೆಯೆಂದು ದಿಲ್ಲಿ ಸರಕಾರ ಮಾಹಿತಿ ನೀಡಿದ ಬಳಿಕ, ಮುಖ್ಯನ್ಯಾಯಮೂರ್ತಿ ಜಿ.ರೋಹಿಣಿ ಹಾಗೂ ಜಯಂತನಾಥರನ್ನೊಳಗೊಂಡ ಪೀಠವು ತೀರ್ಪನ್ನು ಮೀಸಲಿರಿಸಿತು.
ಮಾಲಿನ್ಯದ ಮೇಲೆ ಸಮ-ಬೆಸ ಕಾರ್ಯಾಚರಣೆಯ ಪರಿಣಾಮವನ್ನು ಜ.6ರಂದು ಪೀಠ ಪ್ರಶ್ನಿಸಿದ ಹಾಗೂ ಅದನ್ನು ಒಂದು ವಾರಕ್ಕೆ ಮಿತಗೊಳಿಸುವ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ ಬಳಿಕ ಎಎಪಿ ಸರಕಾರ ಈ ಉತ್ತರ ನೀಡಿದೆ.
Next Story