Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪಠಾಣ್‌ಕೋಟ್ ದಾಳಿ: ಮೋದಿ ಆಡಳಿತಾತ್ಮಕ...

ಪಠಾಣ್‌ಕೋಟ್ ದಾಳಿ: ಮೋದಿ ಆಡಳಿತಾತ್ಮಕ ದಕ್ಷತೆ ಮೇಲೆ ಪ್ರಶ್ನಾರ್ಥಕ ಚಿಹ್ನೆ

ಅಜಯ್ ಬೋಸ್ಅಜಯ್ ಬೋಸ್8 Jan 2016 11:53 PM IST
share
ಪಠಾಣ್‌ಕೋಟ್ ದಾಳಿ: ಮೋದಿ ಆಡಳಿತಾತ್ಮಕ ದಕ್ಷತೆ ಮೇಲೆ ಪ್ರಶ್ನಾರ್ಥಕ ಚಿಹ್ನೆ

   ಪ್ರಧಾನಿ ನರೇಂದ್ರ ಮೋದಿಯವರಿಗೆ 2016ನೆ ವರ್ಷ ಆಘಾತದೊಂದಿಗೆ ಆರಂಭವಾಗಿದೆ. ಪಠಾಣ್‌ಕೋಟ್ ವಾಯು ನೆಲೆಯ ಮೇಲೆ ಗಡಿಯಾಚೆಗಿನ ದಾಳಿಕೋರರು ನಡೆಸಿದ ದಾಳಿ, ಹಲವು ರಂಗಗಳಲ್ಲಿ ಸರಕಾರದ ದೈನ್ಯತೆಯನ್ನು ಬಹಿರಂಗಪಡಿಸಿದೆ. ಇದರ ಜತೆಗೆ ಮೋದಿಯವರ ಆಡಳಿತ ದಕ್ಷತೆ, ರಾಜತಾಂತ್ರಿಕ ಚತುರತೆ, ರಾಜಕೀಯ ಬಲದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಲೂ ಕಾರಣವಾಗಿದೆ. ಘಟನೆಯ ಹೊಣೆಗಾರಿಕೆ ವಿಚಾರದಲ್ಲಿ ಪಂಜಾಬ್ ಪೊಲೀಸರು, ಭದ್ರತಾ ಪಡೆ ಹಾಗೂ ವಿಚಕ್ಷಣಾ ದಳ ಪರಸ್ಪರರನ್ನು ಬೆಟ್ಟು ಮಾಡುವಲ್ಲಿ ತಲ್ಲೀನವಾಗಿದ್ದರೆ, ಇದು ರಾಜ್ಯದ, ದೇಶದ ಹಾಗೂ ಭದ್ರತಾ ಆಡಳಿತ ವ್ಯವಸ್ಥೆಯ ದೊಡ್ಡ ಹಾಗೂ ಸಮಗ್ರ ಲೋಪ ಎನ್ನುವುದು ನಿರ್ವಿವಾದ. ಪಾಕಿಸ್ತಾನದ ಸಶಸ್ತ್ರ ಉಗ್ರರು ಭಾರತದ ಗಡಿಯೊಳಗೆ ಅಷ್ಟು ದೂರಕ್ಕೆ ಬಂದು ಹೇಗೆ ದಾಳಿ ಮಾಡಲು ಸಾಧ್ಯ? ಅದು ಕೂಡಾ ಕಳೆದ ಜುಲೈನಲ್ಲಿ ಗುರುದಾಸಪುರ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಬಳಸಿದ್ದ ಮಾರ್ಗದಲ್ಲೇ ಬಂದು ನಮ್ಮ ಗಡಿಭದ್ರತಾ ಪಡೆ ಅಥವಾ ಪಂಜಾಬ್ ಪೊಲೀಸರಿಂದ ಯಾವ ಪ್ರತಿರೋಧವೂ ಇಲ್ಲದ ರೀತಿಯಲ್ಲಿ ದಾಳಿ ಸಂಘಟಿಸಲು ಹೇಗೆ ಸಾಧ್ಯ?


ಮಾಧ್ಯಮ ಹೊರಗೆಡವಿದ ಸೋಜಿಗದ ಸುದ್ದಿಯೆಂದರೆ, ಒಂದು ಕಾರನ್ನು ಅಪಹರಿಸಿ, ಅದರ ಚಾಲಕನನ್ನು ಹತ್ಯೆ ಮಾಡಿ, ಗುರುದಾಸ್‌ಪುರ ಪೊಲೀಸ್ ಅಧೀಕ್ಷಕರನ್ನು ಅವರ ಸ್ನೇಹಿತ ಹಾಗೂ ಅಡುಗೆ ಸಹಾಯಕನ ಸಹಿತ ಅಪಹರಿಸಿ ಪಂಜಾಬ್‌ನ ಮೂಲೆ ಮೂಲೆಯನ್ನೂ 24 ಗಂಟೆಗಳ ಕಾಲ ಸುತ್ತಿದ್ದಾರೆ. ಈ ದೃಶ್ಯ ಬಿ ಗ್ರೇಡ್‌ನ ಬಾಲಿವುಡ್ ಸಾಹಸ ಚಿತ್ರವನ್ನು ಹೋಲುವಂಥದ್ದು.


ಪಠಾಣ್‌ಕೋಟ್ ವಾಯುನೆಲೆಯಂಥ ಗಡಿಭಾಗದ ಪ್ರಮುಖ ಸೇನಾ ನೆಲೆಗೆ ಅಷ್ಟೊಂದು ದುರ್ಬಲ ಭದ್ರತಾ ವ್ಯವಸ್ಥೆ ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಆದರೆ ವಿವರಣೆಗೆ ನಿಲುಕದ ಸಂಗತಿಯೆಂದರೆ, ಇಂಥ ಉಗ್ರರ ಗಡಣ ಹೇಗೆ ಆ ಆವರಣವನ್ನು ಪ್ರವೇಶಿಸಿ, ಹಲವು ದಿನಗಳ ಕಾಲ ಬಂದೂಕಿನ ಕಾಳಗ ನಡೆಸಲು ಸಾಧ್ಯವಾಯಿತು ಎನ್ನುವುದು. ಏಳು ಮಂದಿ ಭದ್ರತಾ ಸಿಬ್ಬಂದಿಯನ್ನು ಕೊಂದು, 24ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿದರು. ಪಂಜಾಬ್ ಹಾಗೂ ಹೊಸದಿಲ್ಲಿಗೆ ಈ ಸಂಭಾವ್ಯ ದಾಳಿಯ ಸೂಚನೆ ಇದ್ದಾಗ್ಯೂ ರಾಜಾರೋಷವಾಗಿ ಬಂದು ದಾಳಿ ನಡೆಸಲು ಸಾಧ್ಯವಾದದ್ದು ಹೇಗೆ?


ಡಿಸೆಂಬರ್ 25ರಂದು ಮೋದಿ, ಪಾಕಿಸ್ತಾನದ ಪ್ರಧಾನಿ ನವಾಝ್‌ಷರೀಫ್ ಅವರಿಗೆ ಹಸ್ತಲಾಘವ ನೀಡಿ, ತಬ್ಬಿಕೊಂಡು ಸಂತಸ ಹಂಚಿಕೊಳ್ಳುತ್ತಿರುವಾಗಲೇ ಒಂದು ಮಿತ್ರರಾಷ್ಟ್ರ (ಬಹುಶಃ ಅಮೆರಿಕ) ಪಂಜಾಬ್‌ನ ಪ್ರಮುಖ ಸೇನಾ ನೆಲೆಯೊಂದರ ಮೇಲೆ ಪಾಕಿಸ್ತಾನ ಮೂಲದ ಜಿಹಾದಿಗಳು ದಾಳಿ ಮಾಡುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿತ್ತು. ಉಗ್ರರು ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿ ಮಾಡುವ 24 ಗಂಟೆ ಮುನ್ನ ಇದಕ್ಕಿಂತಲೂ ನಿರ್ದಿಷ್ಟವಾದ ವಿಚಕ್ಷಣಾ ಮಾಹಿತಿಗಳು ಸರಕಾರಕ್ಕೆ ಬಂದಿದ್ದವು ಎನ್ನಲಾಗಿದೆ.

ಸ್ಪಂದನೆಗೆ ಆಲಸ್ಯ
ಇಷ್ಟಾಗಿಯೂ, ಈ ಪರಿಧಿಯಲ್ಲಿ ಭದ್ರತಾ ಜಾಲವನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಸರಕಾರ ನಿರ್ಲಕ್ಷದ ಮನೋಭಾವ ತಾಳಿರುವುದು ನಿಜಕ್ಕೂ ಅಚ್ಚರಿದಾಯಕ. ಉಗ್ರರ ದಾಳಿ ಪ್ರಕರಣದ ಬಗ್ಗೆ ಸ್ಪಂದನೆಯ ಹೊಣೆ ಹೊತ್ತಿರುವ ಪ್ರಧಾನಿಯವರ ನಿಕಟವರ್ತಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೇವಲ್ ಅವರ ಪಾತ್ರವನ್ನು ಹಲವು ಮಂದಿ ಭದ್ರತಾ ತಜ್ಞರು ಪ್ರಶ್ನಿಸಿದ್ದಾರೆ. ಅವರಿಂದ ಆಗಿರುವ ದೊಡ್ಡ ಪ್ರಮಾದವೆಂದರೆ, ರಾಷ್ಟ್ರೀಯ ಭದ್ರತಾ ದಳವನ್ನು ಅತಿಯಾಗಿ ಅವಲಂಬಿಸಿದ್ದು. ವಾಸ್ತವವಾಗಿ ಈ ಕಾರ್ಯಾಚರಣೆಯನ್ನು ಅಲ್ಲಿಗೆ ಸನಿಹವಾಗಿದ್ದ ಹಾಗೂ ಉಗ್ರರ ದಾಳಿಯ ವಿರುದ್ಧ ಮಿಂಚಿನ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವಿರುವ ಸೇನಾ ಘಟಕಗಳಿಗೆ ಆ ಹೊಣೆಯನ್ನು ವಹಿಸಬೇಕಿತ್ತು.
ಹೇಗೇ ಆದರೂ, ಅಸಮರ್ಪಕ ಕಸುವು, ನಿಯಂತ್ರಣ ಹಾಗೂ ಸಹಕಾರದ ಕೊರತೆ ಪಠಾಣ್‌ಕೋಟದಲ್ಲಿ ಎದ್ದುಕಾಣುತ್ತದೆ.


ಪರಿಸ್ಥಿತಿ ಇನ್ನಷ್ಟು ಹದಗೆಡಲು ಕಾರಣವೆಂದರೆ, ವಾಸ್ತವವಾಗಿ ಏನು ನಡೆಯುತ್ತಿದೆ ಎಂದು ಜನತೆಗೆ ಸಮರ್ಪಕ ಹಾಗೂ ನಂಬಲರ್ಹ ಮಾಹಿತಿ ನೀಡಲು ಸರಕಾರ ಮುಂದಾಗದಿರುವುದು. ಅಧಿಕೃತ ಮಾಧ್ಯಮಗೋಷ್ಠಿಗಳಲ್ಲಿ, ತಾಂತ್ರಿಕ ಶಬ್ದಗಳಾದ ಉಗ್ರರನ್ನು ತಟಸ್ಥಗೊಳಿಸುವ, ಆಸ್ತಿಗಳನ್ನು ಸಂರಕ್ಷಿಸುವ ಎಂಬಂಥ ವಿವರಣೆ ಮಾಧ್ಯಮಕ್ಕೆ ದೊರಕಿದೆಯೇ ವಿನಃ ಬೇರೇನೂ ಸಿಕ್ಕಿಲ್ಲ. ಗೃಹಸಚಿವರು ಅಪ್ರಬುದ್ಧತೆಯಿಂದ ‘ಕಾರ್ಯಾಚರಣೆ ಯಶಸ್ವಿ’ ಎಂಬ ಟ್ವೀಟ್ ಮಾಡಿ, ಅಸ್ಸಾಂಗೆ ತೆರಳಿದರು. ರಕ್ಷಣಾ ಸಚಿವರು ತಮ್ಮ ತವರು ರಾಜ್ಯ ಗೋವಾದಲ್ಲೇ ಉಳಿದುಕೊಂಡರು. ಪ್ರಧಾನಿಯವರಂತೂ ‘‘ಮಾನವತೆಯ ಶತ್ರುಗಳು ನಮ್ಮ ವಾಯುನೆಲೆಯ ಮೇಲೆ ದಾಳಿ ಮಾಡಿದ್ದಾರೆ’’ ಎಂದು ಸಂಕ್ಷಿಪ್ತವಾಗಿ ಚರಮಗೀತೆ ಹಾಡಿದ್ದನ್ನು ಹೊರತುಪಡಿಸಿದರೆ, ಸಂಪೂರ್ಣ ಮೌನಕ್ಕೆ ಶರಣಾಗಿದ್ದರು.


ರಾಜತಾಂತ್ರಿಕ ದೃಷ್ಟಿಕೋನದಿಂದ ನೋಡಿದರೆ, ಪ್ರಧಾನಿ ಅಪ್ಪುಗೆಯಿಂದ ಪಾಕಿಸ್ತಾನದ ದಾಳಿಯೇನೂ ಕಡಿಮೆಯಾಗಿಲ್ಲ. ಅಚ್ಚರಿಯ ರಾಜತಾಂತ್ರಿಕ ನಡೆಯಾಗಿ ಮೋದಿ ಪಾಕಿಸ್ತಾನಕ್ಕೆ ದಿಢೀರನೆ ಭೇಟಿ ನೀಡಿ ಒಂದು ವಾರದಲ್ಲೇ ಈ ದಾಳಿ ನಡೆದಿದೆ. ಇದು ಪ್ರಧಾನಿಯವರು ಚಾಚಿದ ಸ್ನೇಹಹಸ್ತಕ್ಕೆ ದ್ರೋಹ ಮಾತ್ರವಲ್ಲದೇ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆಯೂ ಗಂಭೀರ ಪರಿಣಾಮ ಬೀರಲಿದೆ. ಇದಕ್ಕಿಂತಲೂ ಅವಮಾನಕರವೆಂದರೆ, ಮೂರನೆ ದಿನದ ಭದ್ರತಾ ಕಾರ್ಯಾಚರಣೆವರೆಗೂ ಘಟನೆಯನ್ನು ಖಂಡಿಸುವ ಹಾಗೂ ಘಟನೆ ಬಗ್ಗೆ ಕಳಕಳಿ ವ್ಯಕ್ತಪಡಿಸುವ ಸಂಬಂಧ ಪಾಕಿಸ್ತಾನದ ಪ್ರಧಾನಿ ನವಾಝ್ ಷರೀಫ್ ಅವರಿಂದ ಮೋದಿಯವರಿಗೆ ಅಥವಾ ಅಲ್ಲಿನ ಪ್ರಧಾನಿ ಭದ್ರತಾ ಸಲಹೆಗಾರರಿಂದ ಭಾರತದ ಭದ್ರತಾ ಸಲಹೆಗಾರರಿಗಾಗಲಿ ಒಂದು ಕರೆಯೂ ಬಂದಿಲ್ಲ.

ರಾಜಕೀಯ ಬೆಲೆ
ಈಗ ಮೋದಿ ಮುಂದಿರುವುದು ಎರಡೇ ಆಯ್ಕೆ. ಒಂದು ಕಲ್ಲು; ಇನ್ನೊಂದು ಗಟ್ಟಿ ಸ್ಥಳ. ಗಡಿಯಾಚೆಗಿನ ದೇಶದಿಂದ ದಾಳಿ ಪ್ರಚೋದನೆಯ ವಾತಾವರಣದಲ್ಲಿ ಮುಂದಿನ ವಾರ ನಡೆಸಲು ಉದ್ದೇಶಿಸಿರುವ ವಿದೇಶಾಂಗ ಸಚಿವರ ದ್ವಿಪಕ್ಷೀಯ ಮಾತುಕತೆಯನ್ನು ಕಾರ್ಯರೂಪಕ್ಕೆ ತರುವುದು ಕಷ್ಟಸಾಧ್ಯ. ಇದೇ ವೇಳೆ ಮಾತುಕತೆ ಇಲ್ಲ ಎಂದು ಘೋಷಿಸಿದರೆ, ಮೋದಿಯವರ ವೈಯಕ್ತಿಕ ರಾಜತಾಂತ್ರಿಕ ವಿಸ್ತರಣೆಯ ಪತನವಾದಂತಾಗುತ್ತದೆ.


ಮೋದಿಯವರ ವೈಯಕ್ತಿಕ ರಾಜಕೀಯ ವರ್ಚಸ್ಸಿನ ಮೇಲೆ ಇದು ಪರಿಣಾಮ ಬೀರಲಿದೆ ಎನ್ನುವುದು ಪ್ರಧಾನಿಗೆ ಎದುರಾಗಿರುವ ಸಮಸ್ಯೆ ಎನ್ನಲಾಗುತ್ತಿದೆ. ಮೋದಿಯವರ ಕಟ್ಟಾ ಅನುಯಾಯಿಗಳು ಕೂಡಾ, ‘‘ಭಾರತದ ವಾಯು ನೆಲೆ ಮೇಲೆ ಉಗ್ರರು ನಡೆಸಿದ ಅತಿದೊಡ್ಡ ದಾಳಿಗೆ ಕೆಲವೇ ದಿನಗಳ ಹಿಂದೆ, ನವಾಝ್ ಷರೀಫ್ ಅವರ ಹುಟ್ಟುಹಬ್ಬದ ಕೇಕ್ ಮತ್ತು ಉಡುಗೊರೆ ಹಂಚಿಕೊಂಡಿರುವುದಕ್ಕೆ ಮೋದಿ ದೊಡ್ಡ ಪ್ರಮಾಣದ ರಾಜಕೀಯ ಬೆಲೆ ತೆರಬೇಕಾಗುತ್ತದೆ’’ ಎಂದು ಅಭಿಪ್ರಾಯಪಡುತ್ತಾರೆ.


ಇದುವರೆಗೆ ಮೋದಿ ಹಾಗೂ ಅವರ ಪಕ್ಷ ರಾಜಕೀಯ ರಾಷ್ಟ್ರೀಯವಾದಿ ಬಣ್ಣದಲ್ಲಿ ಮುಳುಗಿಹೋಗಿತ್ತು. ಪಾಕಿಸ್ತಾನದ ವಿಚಾರದಲ್ಲಂತೂ ಸಾಂಪ್ರದಾಯಿಕ ವಿರೋಧಿ ಎಂದೇ ಸಂಘ ಪರಿವಾರ ಬಿಂಬಿಸುತ್ತಾ ಬಂದಿದೆ. ರಾಜಕೀಯದ ಬಗೆಗಿನ ತಮ್ಮ ದೃಷ್ಟಿಕೋನ, ಈ ಹಿಂದಿನ ಯಾವುದೇ ಮುಖಂಡರಿಗಿಂತ ಸಮರ್ಥ ಎಂದು ಮೋದಿ ಅಂದಾಜಿಸಿದ್ದರು. ಸ್ನೇಹಪರ ಅಟಲ್ ಬಿಹಾರಿ ವಾಜಪೇಯಿ ಅಥವಾ ವೃತ್ತಿಪರ ಡಾ.ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಇಂಥ ಕುಟಿಲತನವನ್ನು ಸಮರ್ಥವಾಗಿಯೇ ನಿಭಾಯಿಸಿದ್ದರು.

ಆದರೆ 56 ಇಂಚಿನ ಎದೆ ಇದೆ ಎಂದು ಬಿಂಬಿಸಿಕೊಳ್ಳುತ್ತಿರುವ ಮೋದಿ, ಗಡಿಯಾಚೆಗೆ ಸ್ನೇಹಹಸ್ತ ಚಾಚುವ ಮೂಲಕ ಆ ಓಘ ಕಳೆದುಕೊಂಡಿದ್ದಾರೆ. ಅತಿರಾಷ್ಟ್ರೀಯವಾದಿ ಪಕ್ಷವಾದ ಶಿವಸೇನೆ ಈಗಾಗಲೇ, ‘‘ಮೋದಿ ತಮ್ಮ ತೋರಿಕೆಯ ದೇಶಭಕ್ತಿಯಯನ್ನು ಓಲೈಕೆಗೆ ಬಳಸಿಕೊಳ್ಳುತ್ತಿದ್ದಾರೆ’’ ಎಂದು ಮೋದಿಗೆ ಟಾಂಟ್ ನೀಡಿದೆ, ಇದೇ ಮಾರ್ಗವನ್ನು ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಪ್ರವೀಣ್ ಭಾಯ್ ತೊಗಾಡಿಯಾ ತುಳಿದರೂ ಅಚ್ಚರಿ ಇಲ್ಲ.
2016ರಲ್ಲಿ ಚುನಾವಣೆಯ ಹೀನಾಯ ಸೋಲುಗಳಿಂದ ಹಾಗೂ ಆರ್ಥಿಕತೆಗೆ ಪುನಶ್ಚೇತನ ನೀಡಲು ವಿಫಲವಾದ ಪ್ರಧಾನಿ, ತಮ್ಮ ಹೊಸ ತಂತ್ರಗಾರಿಕೆಯೊಂದಿಗೆ ಹೊಸ ವರ್ಷದಲ್ಲಿ ತಮ್ಮ ರಾಜಕೀಯ ಭವಿಷ್ಯ ಬದಲಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ದುರದೃಷ್ಟವೆಂದರೆ ಅದು ರೆಕ್ಕೆ ಬಿಚ್ಚಿಕೊಳ್ಳುವ ಮುನ್ನವೇ ನುಚ್ಚುನೂರಾಗಿದೆ.

share
ಅಜಯ್ ಬೋಸ್
ಅಜಯ್ ಬೋಸ್
Next Story
X