ಗೋದಾಮಿನಲ್ಲಿ ಬೆಂಕಿ ಅನಾಹುತ
ಕಾಸರಗೋಡು, ಜ.8: ನಗರದ ಮೀನು ಮಾರುಕಟ್ಟೆ ಸಮೀಪದ ಸಾಮಗ್ರಿ ದಾಸ್ತಾನು ಗೋದಾಮಿನಲ್ಲಿ ಅಗ್ನಿ ಅನಾಹುತ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಕಟ್ಟಡದಿಂದ ಹೊಗೆ ಏಳುತ್ತಿರುವುದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅದರಂತೆ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಬೆಂಕಿ ನಂದಿಸಿದರು. ಗೋದಾಮಿನಲ್ಲಿದ್ದ ಕಟ್ಟಡ ನಿರ್ಮಾಣ ಕಚ್ಚಾ ಸಾಮಾಗ್ರಿಗಳು ಸುಟ್ಟು ಹೋಗಿವೆ. ಈ ಕಟ್ಟಡದಲ್ಲಿ ಗೋದಾಮು ಅಲ್ಲದೆ ಇತರ ಮಳಿಗೆಗಳಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಯ ತುರ್ತು ಕಾರ್ಯಾಚರಣೆಯಿಂದ ಭಾರೀ ಅನಾಹುತ ತಪ್ಪಿದೆ. ಶಾರ್ಟ್ ಸರ್ಕ್ಯೂಟ್ ದುರಂತಕ್ಕೆ ಕಾರಣ ಎನ್ನಲಾಗಿದೆ.
Next Story





