ಬನ್ನಂಜೆ ರಾಜಾ ಬರ್ಕೆ ಪೊಲೀಸ್ ವಶದಲ್ಲಿ
ಮಂಗಳೂರು, ಜ. 8: ಕುಖ್ಯಾತ ಪಾತಕಿ ಬನ್ನಂಜೆ ರಾಜನನ್ನು ಮೂರು ದಿನಗಳ ಕಾಲ ಬರ್ಕೆ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ಕದ್ರಿ ಪೊಲೀಸರ ವಶದಲ್ಲಿದ್ದ ಬನ್ನಂಜೆ ರಾಜಾನನ್ನು ವಿಚಾರಣೆಗಾಗಿ ಪಾಂಡೇಶ್ವರ ಪೊಲೀಸರು ನ್ಯಾಯಾಲಯದ ಮೂಲಕ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಇಂದು ಮತ್ತೆ ಬನ್ನಂಜೆ ರಾಜಾನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಬರ್ಕೆ ಪೊಲೀಸರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಬನ್ನಂಜೆ ರಾಜಾನನ್ನು ರವಿವಾರದವರೆಗೆ ಬರ್ಕೆ ಠಾಣಾ ಪೊಲೀಸರ ವಶಕ್ಕೆ ನೀಡಿದೆ.
ಈತನ ಮೇಲೆ ನಕಲಿ ಪಾಸ್‌ಪೋರ್ಟ್ ಹಾಗೂ ಗಾಂಜಾಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಸಂಬಂಧಿಸಿ ಬರ್ಕೆ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Next Story





