ಉರೂಸ್ ತೋರಣಗಳನ್ನು ಕಿತ್ತೆಗೆದ ಪೊಲೀಸರು: ಆರೋಪ
ಕುಂಜತ್ತೂರು, ಜ.8; ಉದ್ಯಾವರ ಉರೂಸ್ ಪ್ರಯುಕ್ತ ಕುಂಜತ್ತೂರು ಆಸುಪಾಸು ಅಲಂಕರಿಸಲಾಗಿದ್ದ ತೋರಣಗಳನ್ನು ಶುಕ್ರವಾರ ಮುಂಜಾನೆ ಪೊಲೀಸರು ಕಿತ್ತೆಗೆದು ಠಾಣೆಗೆ ಕೊಂಡೊಯ್ದಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಉದ್ಯಾವರ ಸಾವಿರ ಜಮಾಅತ್‌ನಲ್ಲಿ 13 ಮೊಹಲ್ಲಾಗಳಿವೆ. ತೂಮಿನಾಡಿನಿಂದ ಆರಂಭವಾಗಿ ಮಂಜೇಶ್ವರ ರಾಗಂ ಜಂಕ್ಷನ್ ತನಕ ಜಮಾಅತ್‌ನ ಮೊಹಲ್ಲಾ ಗಡಿಗಳಾಗಿವೆ. ಪ್ರತಿ ಉರೂಸ್ ಸಮಾರಂಭಕ್ಕೂ ಈ ಗಡಿ ಪ್ರದೇಶಗಳನ್ನು ಕೇಂದ್ರೀಕರಿಸಿ ಅಲಂಕರಿಸಲಾಗುತ್ತದೆ. ಆದರೆ ಪೊಲೀಸರು ಏಕಾಏಕಿಯಾಗಿ ಕುಂಜತ್ತೂರಿನಿಂದ ತೂಮಿನಾಡು ತನಕ ಹಾಗೂ ಉದ್ಯಾವರ ಜುಮಾ ಮಸೀದಿ ರಸ್ತೆ ಬಳಿ ಹಾಕಿದ ಕಂಬ ಹಾಗೂ ತೋರಣಗಳನ್ನು ಕಿತ್ತೆಗೆದಿದ್ದಾರೆ. ಈ ಬಗ್ಗೆ ಜಮಾಅತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Next Story





