ರಸ್ತೆ ಸುರಕ್ಷತಾ ನಿಯಮ ಪಾಲಿಸದಿದ್ದರೆ ಪರವಾನಿಗೆ ಅಮಾನತು: ಎಸ್ಪಿ

ಮಂಗಳೂರು, ಜ.8: ರಸ್ತೆ ಅಪಘಾತ ಗಳನ್ನು ತಪ್ಪಿಸುವ ಹಾಗೂ ಸಾರ್ವಜನಿಕ ರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವ ಉದ್ದೇಶದಿಂದ ರಸ್ತೆ
ಸುರಕ್ಷ ತೆಯ ನಿಯಮಗಳನ್ನು ಪಾಲಿಸದ ವಾಹನಗಳ ಚಾಲಕರ ಪರವಾನಿಗೆ ಯನ್ನು ಕನಿಷ್ಠ 3 ತಿಂಗಳಿಗೆ ಅಮಾನತು ಗೊಳಿಸಲಾಗುವುದು ಎಂದು ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ. ಹೇಳಿದ್ದಾರೆ. ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ಯಲ್ಲಿ ಅವರು ಈ ವಿಷಯ ತಿಳಿಸಿದರು. ಅಪಘಾತಗಳಿಂದ ಆಗುವ ಸಾವು ನೋವು, ನಷ್ಟದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ರಾಧಾಕೃಷ್ಣನ್ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತೆ ಕುರಿತು ಸಮಿತಿ ರಚಿಸಲಾಗಿದೆ. ಸಮಿತಿಯ ನಿರ್ಧಾರದನ್ವಯ ಮದ್ಯ ಪಾನ ಮಾಡಿ ವಾಹನ ಚಲಾಯಿಸು ವುದು, ಸಿಗ್ನಲ್ ಉಲ್ಲಂಘನೆ, ನಿಗ ದಿತ ಸಾಮರ್ಥ್ಯಕ್ಕಿಂತ ಅಧಿಕ ಪ್ರಯಾ ಣಿಕರನ್ನು ಹೊತ್ತೊಯ್ಯುವುದು, ಅತೀ ವೇಗದ ಚಾಲನೆ, ಸರಕು ಸಾಗಾಟದ ವಾಹನದಲ್ಲಿ ಜನರ ಸಾಗಾಟ, ವಾಹನ ಚಾಲನೆ ಸಂದರ್ಭ ಮೊಬೈಲ್‌ನಲ್ಲಿ ಮಾತನಾಡುವುದು ಮೊದಲಾದ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡದ ಜತೆ ಚಾಲನಾ ಪರವಾನಿಗೆ ವಶಕ್ಕೆ ಪಡೆದು ಕನಿಷ್ಠ 3 ತಿಂಗಳು ಅಮಾನತುಗೊಳಿ ಸಲಾಗುವುದು ಎಂದು ವಿವರಿಸಿದರು. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿ ಯಲ್ಲಿ ಮುಂದಿನ 10 ದಿನಗಳ ಬಳಿಕ ಈ ಆಂದೋಲನವನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್, ಉಪ ಸಾರಿಗೆ ಆಯುಕ್ತ ಜಿ.ಎಸ್. ಹೆಗಡೆ ಉಪಸ್ಥಿತ ರಿದ್ದರು.
ಬಾಲಕರಿಂದ ವಾಹನ ಚಾಲನೆ: ಪತ್ತೆಗೆ ವಿಶೇಷ ಆಂದೋಲನ
ಇತ್ತೀಚಿನ ದಿನಗಳಲ್ಲಿ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಕೆಲ ಶಾಲಾ ಕಾಲೇಜುಗಳಿಗೆ ಅಪ್ರಾಪ್ತ ವಯಸ್ಸಿನ ಯುವಕರು ಮೋಟಾರ್ ವಾಹನಗಳನ್ನು ಚಲಾಯಿಸಿಕೊಂಡು ಬರುತ್ತಿರುವ ದೂರುಗಳು ಬರುತ್ತಿದ್ದು, ಈ ಬಗ್ಗೆ ಗಮನಹರಿಸುವಂತೆ ಶಾಲಾ ಕಾಲೇಜುಗಳಿಗೆ ಸುತ್ತೋಲೆಗಳನ್ನು ಹೊರಡಿಸಲು ಜಿಲ್ಲಾ ಪೊಲೀಸ್ ಇಲಾಖೆ ನಿರ್ಧರಿಸಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರು ಹಾಗೂ ಚಾಲನಾ ಪರವಾನಿಗೆ ಇಲ್ಲದೆ ಮೋಟಾರ್ ವಾಹನಗಳನ್ನು ಓಡಿಸುವ ಬಗ್ಗೆ ಪೋಷಕರು ಹಾಗೂ ಶಾಲಾಡಳಿತ ಮಂಡಳಿ ಗಮನ ಹರಿಸಬೇಕು. ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸುವುದು ಕಂಡುಬಂದಲ್ಲಿ ಪೊಲೀಸರು ದಂಡ ಹಾಕುವ ಜೊತೆಗೆ ವಾಹನವನ್ನು ವಶಕ್ಕೆ ಪಡೆಯಲಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳ ಮೂಲಕ ಶಿಕ್ಷಣ ಸಂಸ್ಥೆ ಗಳಿಗೆ ಮಾಹಿತಿ ಒದಗಿಸುವ ನಿಟ್ಟಿ ನಲ್ಲಿ ಈ ತಿಂಗಳಲ್ಲಿ ವಿಶೇಷ ಆಂದೋ ಲನ ನಡೆಸಲಾಗುವುದು.
-ಡಾ.ಶರಣಪ್ಪ, ದ.ಕ. ಎಸ್ಪಿ







