ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಶಿರ್ವ, ಜ.8: ವೈಯಕ್ತಿಕ ಕಾರಣದಿಂದ ಮನನೊಂದ ಪಾದೂರು ಗ್ರಾಮದ ಕೊಲ್ಲಬೆಟ್ಟುವಿನ ಫ್ರಾನ್ಸಿಸ್ ವಿಕ್ಟರ್ ಪಿಂಟೋ(48) ಎಂಬವರು ಜ.7ರಂದು ಬೆಳಗ್ಗೆ ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಉಡುಪಿಯ ಹೊಟೇಲ್ ಟೂರಿಸ್ಟ್‌ನ ರೂಮಿನಲ್ಲಿ ಉಳಿದು ಕೊಂಡಿದ್ದ ಕುಂದಾಪುರದ ಸಂಜೀವ ಶೆಟ್ಟಿ(56) ಎಂಬವರು ಜ.8ರಂದು ಬೆಳಗ್ಗೆ ರೂಂನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





