ನೀರಿನ ಬಕೆಟ್‌ಗೆ ಬಿದ್ದು ಮಗು ಮೃತ್ಯು
ಉಡುಪಿ, ಜ.8: ಆಟವಾಡುತ್ತಿದ್ದ ಮಗುವೊಂದು ಬಕೆಟ್‌ನಲ್ಲಿದ್ದ ನೀರಿಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಕುಂಜಿಬೆಟ್ಟು ಸಮೀಪದ ಸಗ್ರಿ ಎಂಬಲ್ಲಿ ನಡೆದಿದೆ.
ಮೃತ ಮಗುವನ್ನು ಸಗ್ರಿಯ ಪ್ರೇಮಚಂದ್ರ ಐತಾಳ್ ಎಂಬವರ ಒಂದು ವರ್ಷ ಮೂರು ತಿಂಗಳಿನ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಮಗು ಮನೆಯೊಳಗೆ ಆಟವಾಡುತ್ತ ಒಳಗಡೆ ನೀರು ತುಂಬಿದ ಬಕೆಟ್‌ಗೆ ಕವಚಿ ಬಿತ್ತೆನ್ನೆಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಮಗು ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿತು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





