ಬಾವಿಗೆ ಬಿದ್ದು ಕೂಲಿ ಕಾರ್ಮಿಕ ಮೃತ್ಯು
ಕಾಸರಗೋಡು, ಜ.8: ಬಾವಿಗೆ ಬಿದ್ದು ಕೂಲಿ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಪೆರ್ಲ ಬಳಿಯ ಬೆಂಗಪದವು ಎಂಬಲ್ಲಿ ನಡೆದಿದೆ. ಮೃತರನ್ನು ಪೆಲ್ತಾಜೆಯ ಪದ್ಮನಾಭ ನಾಯ್ಕಾ ( 30) ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿಯಿಂದ ಇವರು ನಾಪತ್ತೆಯಾಗಿದ್ದರು. ಕೆಲಸಕ್ಕೆ ತೆರಳಿದ್ದ ಇವರು ಮನೆಗೆ ಮರಳುತ್ತಿದ್ದಾಗ ದಾರಿ ನಡುವಿನ ಆವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದರು. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





