ಹಲ್ಲೆ ಖಂಡಿಸಿ ವರ್ತಕರಿಂದ ಧರಣಿ
ಕಾಸರಗೋಡು, ಜ.8: ವರ್ತಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಂ. ಜೋಸ್ ತಯ್ಯಿಲ್ರ ಮೇಲೆ ತಲೆಹೊರೆ ಕಾರ್ಮಿಕರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಶುಕ್ರವಾರ ಜಿಲ್ಲೆಯಲ್ಲಿ ವರ್ತಕರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಚಿತ್ತಾರಿಕಾಲ್ನಲ್ಲಿ ತಲೆಹೊರೆ ಕಾರ್ಮಿಕರು ಜೋಸ್‌ರ ಮೇಲೆ ಹಲ್ಲೆ ನಡೆಸಿದ್ದರು. ಜೊತೆಗಿದ್ದ ವ್ಯಾಪಾರಿಗಳಾದ ಪರಪ್ಪದ ಮುಹಮ್ಮದ್ ಮತ್ತು ಪ್ರಮೋದ್‌ರ ಮೇಲೆಯೂ ಹಲ್ಲೆ ನಡೆಸಲಾಗಿತ್ತು.ಇದನ್ನು ಖಂಡಿಸಿ ವರ್ತಕರು ಅಂಗಡಿ ಮುಂಗಟ್ಟು ಮುಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
Next Story





