ಇಂದು ಸ್ಪೆಕ್ಟ್ರಮ್-2016
ಮಂಗಳೂರು, ಜ.8: ಹೃದ್ರೋಗ ತಜ್ಞರ ಒಂದು ದಿನದ ಸಮ್ಮೇಳನ ‘ಸ್ಪೆಕ್ಟ್ರಮ್-2016’ ಜ.9ರಂದು ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆಯಲಿದೆ.
ಈ ಸಮ್ಮೇಳನದಲ್ಲಿ ಯುಎಸ್‌ಎ ಹಾಗೂ ಕೆನಡಾದ ವಿಷಯ ತಜ್ಞರು ಭಾಗವಹಿಸಲಿದ್ದಾರೆ. ಹೃದಯ ಸಂಬಂಧಿ ಕಾಯಿಲೆ ಹಾಗೂ ವಿಚಾರಗಳ ಬಗ್ಗೆ ಉಪ ನ್ಯಾಸ, ಸಂವಾದ, ರಸಪ್ರಶ್ನೆ ಹಾಗೂ ವಿಚಾರ ವಿನಿಮಯಗಳು ನಡೆ ಯಲಿವೆ ಎಂದು ಸಮ್ಮೇಳನದ ಸಂಚಾಲಕ, ಎ.ಜೆ. ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಬಿ.ವಿ.ಮಂಜುನಾಥ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





