ನಮ್ಮ ಕ್ಯಾಂಪಸ್ ಯುದ್ಧರಂಗ: ಎಫ್‌ಟಿಐಐ ವಿದ್ಯಾರ್ಥಿ

ಕಳೆದ 139 ದಿನಗಳಿಂದ ಸುಧೀರ್ಘ ಮುಷ್ಕರ ನಡೆಸುತ್ತಿರುವ ನಾವು ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಹಲವು ವೇದಿಕೆಗಳಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಆದರೆ ಈ ಅಂತಿಮ ಆಘಾತ ನಮಗೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿದ್ದ ನಂಬಿಕೆಯಲ್ಲೇ ಅಲ್ಲಾಡಿಸಿದೆ.
ಗುರುವಾರ (ಜನವರಿ 7) ಬೆಳಿಗ್ಗೆ, ನೂತನ ಅಧ್ಯಕ್ಷ ಗಜೇಂದ್ರ ಚೌಹಾಣ್ ಕ್ಯಾಂಪಸ್‌ಗೆ ಆಗಮಿಸುವ ವೇಳೆಗೆ ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ವಿದ್ಯಾರ್ಥಿ ಮುಖ್ಯದ್ವಾರದ ಬಳಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ. ಈ ಚಳವಳಿ ಆರಂಭವಾದಾಗಿನಿಂದ ಇಂದಿನವರೆಗೂ ನಿರಂತರವಾಗಿ ಮುಂದುವರಿದಿದ್ದರೂ, ವಿದ್ಯಾರ್ಥಿಗಳು ಹಿಂಸೆ ಅಥವಾ ವಿಧ್ವಂಸಕ ಕೃತ್ಯಕ್ಕೆ ಇಳಿದಿಲ್ಲ ಎನ್ನುವುದು ಗಮನಾರ್ಹ. ಎಚ್ಚರಿಕೆ, ನಿರ್ದಾಕ್ಷಿಣ್ಯ ಹಲ್ಲೆಯಂಥ ತೀರಾ ಪ್ರಚೋದಕ ಪರಿಸ್ಥಿತಿಯಲ್ಲೂ ತಮ್ಮ ನಿಯತ್ತಿನ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ.
ಇಂದಿಗೂ ವಿದ್ಯಾರ್ಥಿಗಳು ಶಾಂತಿಯುತ, ಅಹಿಂಸಾತ್ಮಕ ಹಾಗೂ ನಿರಂತರತೆಯನ್ನೇ ಕಾಪಾಡಿಕೊಂಡು ಬಂದಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ, ಪಿಲೀಸ್ ವಾಹನದೊಳಗೆ ಗಲಭೆ ಸೃಷ್ಟಿಯಾಗಲು ಕಾರಣರಾದರು. ಅಗತ್ಯಕ್ಕಿಂತ ಹೆಚ್ಚು ಪೊಲೀಸ್ ಬಲಪ್ರಯೋಗವಾಗಿದ್ದರೂ, ಅಧಿಕಾರಿಗಳು, ಕನಿಷ್ಠ ಪೊಲೀಸರನ್ನು ಬಳಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಘಟನೆಯ ವಿಡಿಯೊಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಪೊಲೀಸರ ಕನಿಷ್ಠ ಎಂದರೇನು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇದನ್ನು ನೋಡಿ ಜನರೇ ತೀರ್ಪು ನೀಡಬಹುದು.
ಸುಮಾರು 40 ವಿದ್ಯಾರ್ಥಿಗಳನ್ನು ಬಂಧಿಸಿ, ಶಿವಾಜಿನಗರ ಠಾಣೆಗೆ ಕರೆದೊಯ್ಯಲಾಗಿದೆ. ಪೊಲೀಸ್ ಪಹರೆ ಇನ್ನೂ ಎಫ್‌ಟಿಟಿಐ ಕ್ಯಾಪಸ್‌ನಲ್ಲಿದೆ. ಪ್ರತಿಯೊಬ್ಬ ವಿದ್ಯಾಥಿಗೆ ಒಬ್ಬರಂತೆ ಸುಮಾರು 150 ಪೊಲೀಸರು ಇದ್ದು, ಕ್ಯಾಂಪಸ್ ಪ್ರವೇಶದಿಂದ ಹಿಡಿದು ಎಲ್ಲೆಡೆ ಬ್ಯಾರಿಕೇಡ್‌ಗಳನ್ನು ಸೃಷ್ಟಿಸಲಾಗಿದೆ. ಕ್ಯಾಂಪಸ್‌ನ ಪಠ್ಯಚಟುವಟಿಕೆಗಳಿಗೆ ಇದರಿಂದ ಅಡ್ಡಿಯುಂಟಾಗಿದ್ದು, ಇಡೀ ಕ್ಯಾಂಪಸ್ ಯುದ್ಧನೆಲೆಯಾಗಿ ಪರಿವರ್ತನೆಯಾಗಿದೆ.
ಒಂದು ಗಂಟೆ ಕಾಲ ಚೌಹಾನ್ ಅಧ್ಯಕ್ಷತೆಯಲ್ಲಿ ವಿವಿಧ ಸಭೆಗಳು ನಡೆದ ಬಳಿಕ ಅವರು ಪೊಲೀಸ್ ರಕ್ಷಣೆಯಲ್ಲಿ ವಾಪಸ್ಸಾದರು. ಆದರೆ ಬಹಳಷ್ಟು ಮಂದಿ ವಿದ್ಯಾರ್ಥಿಗಳು ಇನ್ನೂ ಪೊಲೀಸ್ ಕಸ್ಟಡಿಯಲ್ಲೇ ಇದ್ದಾರೆ. ಈ ಹಂತದಲ್ಲಿ ನಾನು ಒಂದು ಪ್ರಶ್ನೆ ಕೇಳಲೇಬೇಕಾಗುತ್ತದೆ. ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು, ಸಂದರ್ಶಕ ಹಾಗೂ ಕಾಯಂ ಬೋಧಕ ಸಿಬ್ಬಂದಿ ಹಾಗೂ ಸಮಾಜದ ದೊಡ್ಡ ವರ್ಗಗಳ ಧ್ವನಿಯನ್ನು ದುರುದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದ ಮೇಲೆ ಈ ಸಂಸ್ಥೆ ಯಾರಿಯಾಗಿ ಆರಂಭವಾದದ್ದು? ಇದು ಯಾವ ರೀತಿಯ ಸರ್ಕಾರ?
ಎಫ್‌ಟಿಟಿಐ ಭವಿಷ್ಯ ಏನಾಗುತ್ತದೆ ಎನ್ನುವುದಂತೂ ಗೊತ್ತಿಲ್ಲ. ಆದರೆ ನನಗೆ ತಿಳಿದಿರುವಂತೆ ಹೊಸ ಅಧ್ಯಕ್ಷರ ವಿರುದ್ಧದ ತಮ್ಮ ನಿಲುವಿಗೆ ವಿದ್ಯಾರ್ಥಿಗಳು ಬದ್ಧರಾಗಿದ್ದಾರೆ ಮತ್ತು ಪ್ರಾಮಾಣಿಕರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ವಾದದಲ್ಲಿ ಹೆಚ್ಚು ತಾರ್ಕಿಕವಾಗಿದ್ದಾರೆ ಹಾಗೂ ಪ್ರತಿಭಟನೆ ನಡೆಸಿಕೊಂಡೇ ಬರುತ್ತಿದ್ದಾರೆ. ನಮ್ಮ ಸಂಸ್ಥೆಯ ಬಗ್ಗೆ ಹಾಗೂ ನಮ್ಮಿಂದ ಬಳಿಕ ಬಮದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ನಮಗೆ ಕಳವಳವಾಗುತ್ತಿದೆ. ವಿದ್ಯಾರ್ಥಿಗಳ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಕೂಡಾ ನಿರಾಕರಿಸಲಾಗುತ್ತಿದೆಯೇ ಎನ್ನುವುದು ನಮ್ಮ ಕಾಳಜಿ.
ಇದಕ್ಕಾಗಿ ನಾವು ಹೋರಾಟ ಮುಂದುವರಿಸುತ್ತೇವೆ. ನಮ್ಮ ಹೋರಾಟವನ್ನು ಹೇಗೆ ಮುಂದುವರಿಸಬೇಕು ಎನ್ನುವುದು ನಮಗೆ ಗೊಒತ್ತು. ನಮ್ಮ ಸಂಸ್ಥೆ ಸರ್ಕಾರದ ಅಹಂ, ಪ್ರಶ್ನಾರ್ಹ ಕಾರ್ಯಸೂಚಿಗಿಂತ ದೊಡ್ಡದು. ಪ್ರಜಾಪ್ರಭುತ್ವ ವ್ಯವಸ್ಥೆ ವಾಸ್ತವವಾಗಿ ಜನರಿಂದ, ಜನರಿಗಾಗಿ ಜನರೇ ನಡೆಸುವ ವ್ಯವಸ್ಥೆ. ಆದರೆ ಅಧಿಕಾರದಲ್ಲಿರುವವರಿಗೆ, ಅದು ಅರಿವಿಗೆ ಬಂದಂತಿಲ್ಲ. ಆದರೆ ಅದು ಆಗಬಹುದು; ಆಗಲೇಬೇಕು. ಇಲ್ಲದಿದ್ದರೆ ಕರಾಳ ದಿನಗಳು ನಮಗಷ್ಟೇ ಅಲ್ಲ; ದೇಶದ ಸಮಸ್ತ ಜನತೆಗೆ.
(ಲೇಖಕ ಎಫ್‌ಟಿಟಿಐನ 2014ನೇ ಸಾಲಿನ ಚಿತ್ರಕಥೆ ವಿಭಾಗದ ವಿದ್ಯಾರ್ಥಿ)







