ಕಾಸರಗೋಡು : ಕ್ರಿಮಿನಲ್ ಕಾಲಿಯಾ ರಫೀಕ್ ವಿರುದ್ದ ಗೂಂಡಾ ಕಾಯ್ದೆ
ಕಾಸರಗೋಡು : ಕುಖ್ಯಾತ ಕ್ರಿಮಿನಲ್ ಕಾಲಿಯಾ ರಫೀಕ್ ವಿರುದ್ದ ಗೂಂಡಾ ಕಾಯ್ದೆ ಹೇರಲಾಗಿದ್ದು , ಈತನನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದ್ದು, ಎರಡು ಕೊಲೆ ಸೇರಿದಂತೆ 35 ಕ್ಕೂ ಅಧಿಕ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟತೆ ಜೈಲು ಶಿಕ್ಷೆ ಅನುಭವಿಸಿ ತಿಂಗಳ ಹಿಂದೆ ಬಿಡುಗಡೆ ಗೊಂಡಿದ್ದ ಕಾಲಿಯಾ ರಫೀಕ್ ನನ್ನು ಕೆಲ ದಿನಗಳ ಹಿಂದೆ ಉಪ್ಪಳ ದಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಪಟ್ಟಂತೆ ಬಂಧಿಸಲಾಗಿತ್ತು .
ಇನ್ನೋರ್ವ ಆರೋಪಿ ಕಸಾಯಿ ಅಲಿ ವಿರುದ್ದ ಗೂಂಡಾ ಕಾಯ್ದೆ ಹೂಡುವ ಬಗ್ಗೆಯೂ ಶೀಘ್ರ ತೀರ್ಮಾನ ತೆಗೆದುಕೊಳ್ಳ ಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Next Story





