ಮೆಲ್ಕಾರ್ ಮಹಿಳಾ ಕಾಲೇಜ್ ನಲ್ಲಿ ಕ್ರೀಡಾ ದಿನಾಚರಣೆ

ಮೆಲ್ಕಾರ್ ಮಹಿಳಾ ಕಾಲೇಜ್ ನ 7ನೇ ವರ್ಷದ ಕ್ರೀಡಾ ದಿನವನ್ನು ಕಾಲೇಜ್ ವಠಾರದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ನಿವೃತ್ತ ಉಪ ತಹಶೀಲ್ದಾರ್ ಡಿ.ಬಿ. ಅಬೂಬಕರ್ ಉದ್ಘಾಟಿಸಿ ಮಾತನಾಡಿದರು. ಸಮನ್ವಯ ಟೀಚೆರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಇದರ ಅಧ್ಯಕ್ಷ ಬಿ. ಮುಹಮ್ಮದ್ ತುಂಬೆ ಉಪಸ್ಥಿತರಿದ್ದರು.
ಕಾಲೇಜ್ ಪ್ರಿನ್ಸಿಪಾಲ್ ಬಿ.ಕೆ. ಅಬ್ದುಲ್ ಲತೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ಸುನಿತಾ ಅಂಜೆಲಿನ್ ಪಿರೇರಾ, ಉಪನ್ಯಾಸಕಿ ಎಂ.ಪಿ. ಮಮತಾ ರಾವ್ ಈ ಸಂದರ್ಭ ಉಪಸ್ಥಿತರಿದ್ದರು.
ವಿದ್ಯಾರ್ಥಿ ಮುಖಂಡರಾದ ನೌಸೀನಾ, ಮರಿಯಮ್ ಆಬಿದಾ ಮತ್ತು ಆಯಿಷಾ ಬಾನು ಕಾರ್ಯಕ್ರಮ ನಿರೂಪಿಸಿದರು.
Next Story





