ಪುತ್ತೂರು-ದರ್ಬೆ ಫ್ರೆಂಡ್ಸ್ ವತಿಯಿಂದ "ಪ್ರವಾದಿ ಸಂದೇಶ" ಪುಸ್ತಕ ಬಿಡುಗಡೆ

ಆಧುನಿಕ ಯುಗದಲ್ಲಿ ಜೀವಿಸುತ್ತಿರುವ ನಮಗೆ ವಿಶ್ವಕ್ಕೆ ಮಾದರಿ ಆದ ಪ್ರವಾದಿ ಸ.ಅ. ಸಂದೇಶ ಅಗತ್ಯ:ಪುತ್ತೂರು ತಂಙಲ್ ದರ್ಬೆ ಫ್ರೆಂಡ್ಸ್ ವತಿಯಿಂದ
" ಪ್ರವಾದಿ ಸಂದೇಶ " ಪುಸ್ತಕ ಬಿಡುಗಡೆ ತಾ 9.1.2016 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಲ್ಹಾಜ್ ಅಹಮದ್ ಪುಕೋಯ ತಙಂಲ್ ಪುತ್ತೂರು ಮಾತನಾಡಿ ಆಧುನಿಕ ಯುಗದಲ್ಲಿ ಜೀವಿಸುತ್ತಿರುವ ನಮಗೆ ವಿಶ್ವಕ್ಕೆ ಮಾದರಿ ಆದ ಪ್ರವಾದಿ ಸ.ಅ. ಸಂದೇಶ ಅಗತ್ಯ ಎಂದರು ದರ್ಬೆ ಫ್ರೆಂಡ್ಸ್ ನ ಯುವಕರು ಒಂದು ಪುಸ್ತಕ ಪ್ರಕಾಶನ ಮಾಡುವ ಮೂಲಕ ಆದರ್ಶವಾಗಿ ಅಳವಡಿಸಿ ಇನ್ನೊಬ್ಬರಿಗೆ ತಲುಪಿಸುವ ಕೆಲಸ ಶ್ಲಾಘನೀಯವಾದ ವಿಚಾರ ಇದಕ್ಕೆ ಅಲ್ಲಾಹು ಇಹಪರ ಪ್ರತಿಫಲ ನೀಡಲಿ ಎಂದು ಪ್ರಾರ್ಥಿಸಿದರು. ಎಸ್.ಬಿ.ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
"ಪ್ರವಾದಿ ಸಂದೇಶ" ಪುಸ್ತಕದಲ್ಲಿ ಕೂರ್ನಡ್ಕ ಖತೀಬ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ,ಎಂ.ಎಸ್.ಎಂ ಝೈನಿ ಕಾಮಿಲ್ ಸಖಾಫಿ,ಬದ್ರಿಯ ಮಸೀದಿ ಖತೀಬ್ ಎಸ್.ಬಿ.ದಾರಿಮಿ ಉಸ್ತಾದ್,ದರ್ಬೆ ಮಹಮ್ಮದೀಯ ಮದ್ರಾಸ ಸದರ್ ಹಮೀದ್ ದಾರಿಮಿ ಲೇಖನ ಬರೆದ್ದಿದಾರೆ
ಈ ಸಂಧಂರ್ಭದಲ್ಲಿ ಅಧ್ಯಾಪಕರಾದ ಖಾದರ್ ಮುಸ್ಲಿಯಾರ್.ದರ್ಬೆ ಮದ್ರಸ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಅಜಾದ್, ಅನ್ಸಾರುದ್ದಿನ್ ಜಮಾತ್ ಕಮಿಟಿ ಅಧ್ಯಕ್ಷ ಅದ್ದು ಹಾಜಿ ಸಾಲ್ಮರ,ದರ್ಬೆ ಮದ್ರಸ ಕಾರ್ಯದರ್ಶಿ ಅಬ್ದುಲ್ ಅಝೀಝ್,ಖಜಾಂಜಿ ಪಿ.ಬಿ.ಹಸೈನಾರ್.ಯೂಸುಫ್ ಮೈದಾನಿಮೂಲೆ,ಉಸ್ಮಾನ್ ಕುಂಙ ಹಾಜಿ ದರ್ಬೆ,ಯೂನುಸ್ ಖಾನ್ ದರ್ಬೆ,ಎಲ್.ಟಿ.ರಜಾಕ್ ಹಾಜಿ,ಡಾ||ಸರ್ಫ್ರಾಝ್ ಇಸ್ಮಾಯಿಲ್ ಉಪಸ್ಥಿತರಿದ್ದರು ದರ್ಬೆ ಫ್ರೆಂಡ್ಸ್ ನ ಸದಸ್ಯರಾದ,ಅರ್ಷಾದ್ ದರ್ಬೆ,ಜಾಬಿರ್ ದರ್ಬೆ,ಶಾಫಿ ಸಂಟ್ಯಾರ್,ಇರ್ಶಾದ್ ಅಜ್ಜಿಕಲ್,ಯೂಸುಫ್ ಅರ್ಶಾದ್ ದರ್ಬೆ,ಇಮ್ತಿಯಾಜ್ ಪಾರ್ಲೆ,ಅಬ್ದುಲ್ ಆಸೀಫ್,ಸಲ್ಮಾನ್ ದರ್ಬೆ,ಫಾರಿಸ್ ದರ್ಬೆ,ತಸ್ರೀಫ್ ಕಲ್ಲಗುಡ್ಡೆ,ರಾಹಿಲ್ ಹಟ್ಟ,ನವಾಜ್ ಹರ್ಷ,ಸಹೀನ್ ದರ್ಬೆ,ನಾಜಿಸ್ ದರ್ಬೆ ಉಪಸ್ಥಿತರಿದ್ದರು.
ಅರ್ಷದ್ ದರ್ಬೆ ಕಾರ್ಯಕ್ರಮ ನಿರೂಪಿಸಿ ವಂಧಿಸಿದರು







