ಈಜಿಪ್ಟ್: ವಿದೇಶಿ ಪ್ರವಾಸಿಗರ ಮೇಲೆ ದಾಳಿ
ಕೈರೊ, ಜ.9: ಈಜಿಪ್ಟ್‌ನ ರಾಜಧಾನಿ ಕೈರೊ ಸಮೀಪದ ರೆಡ್‌ಸೀ ರೆಸಾರ್ಟ್‌ನಲ್ಲಿರುವ ಹೊಟೇಲೊಂದಕ್ಕೆ ನುಗ್ಗಿದ ಅಜ್ಞಾತ ಬಂದೂಕುಧಾರಿಗಳು ನಡೆಸಿದ ಭೀಕರ ದಾಳಿಗೆ ಮೂವರು ವಿದೇಶಿ ಪ್ರವಾಸಿಗರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಉನ್ನತ ದರ್ಜೆಯ ಹೊಟೇಲೊಂದರಲ್ಲಿ ನಡೆದ ಈ ಘಟನೆಯಲ್ಲಿ ಇಬ್ಬರು ದಾಳಿಕಾರರನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದಾರೆ. ಗಾಯಗೊಂಡಿರುವ ವಿದೇಶಿಯರ ರಾಷ್ಟ್ರೀಯತೆ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲವೆನ್ನಲಾಗಿದೆ. ಪ್ರವಾಸಿಗರಿಗೆ ದಾಳಿಕಾರರು ಚೂರಿಯಿಂದ ಇರಿದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ವರದಿ ತಿಳಿಸಿದೆ.
ದಾಳಿಕಾರರು ವಿದೇಶಿ ಪ್ರವಾಸಿಗರನ್ನು ಅಪಹರಣಗೈಯಲು ಯತ್ನಿಸಿದ್ದು, ಅವರಲ್ಲಿ ಓರ್ವನು ಸ್ಫೋಟಕಗಳ ಪಟ್ಟಿಯನ್ನು ಧರಿಸಿದ್ದನು ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿ ನಡೆದಿರುವ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಅದನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story