ಒಬಾಮರ ನಾಯಿಯ ಅಪಹರಣಕ್ಕೆ ಯತ್ನಿಸಿದಾತನ ಬಂಧನ
ವಾಷಿಂಗ್ಟನ್, ಜ.9: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರ ನಾಯಿಯೊಂದನ್ನು ಅಪಹರಿಸುವ ಉದ್ದೇಶದಿಂದ ವಾಷಿಂಗ್ಟನ್‌ಗೆ ತೆರಳಿದ್ದನೆನ್ನಲಾಗಿರುವ ಉತ್ತರ ಡಕೋಟಾದ ವ್ಯಕ್ತಿಯೋರ್ವನನ್ನು ಬಂಧಿಸಿರುವುದಾಗಿ ವಾಷಿಂಗ್ಟನ್‌ನಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಅಧ್ಯಕ್ಷರ ನಿವಾಸದಲ್ಲಿನ ಸಾಕುನಾಯಿಯನ್ನು ಅಪಹರಿಸಲು ರಾಜಧಾನಿಯತ್ತ ಪ್ರಯಾಣ ಬೆಳೆಸಿದ್ದನೆನ್ನಲಾದ ಉತ್ತರ ಡಕೋಟಾದ ಸ್ಕಾಟ್ ಡಿ. ಸ್ಟಾಕರ್ಟ್ ಎಂಬಾತನನ್ನು ಬೇಹುಗಾರಿಕೆ ಅಧಿಕಾರಿಗಳು ವಿಚಾರಣೆಗೊಳಪಡಿಸಿರುವುದಾಗಿ ವಾಷಿಂಗ್ಟನ್ ಡಿಸಿಯ ಉನ್ನತ ನ್ಯಾಯಾಲಯದ ಮೂಲಗಳು ತಿಳಿಸಿವೆ.ಅಮೆರಿಕದ ಅಧ್ಯಕ್ಷ ಕುಟುಂಬವು ಬೊ ಹಾಗೂ ಸನ್ನಿ ಎಂಬ ಹೆಸರಿನ ಎರಡು ಪೋರ್ಚುಗೀಸ್ ತಳಿಯ ನಾಯಿಗಳನ್ನು ಸಾಕುತ್ತಿದೆ.
Next Story