ಚೀನಾ: 2,500 ಮಾಲಿನ್ಯಕಾರಕ ಸಂಸ್ಥೆಗಳ ಮುಚ್ಚುಗಡೆ
ಬೀಜಿಂಗ್, ಜ.9: ಈ ವರ್ಷದ ಅವಧಿಯಲ್ಲಿ ಬೀಜಿಂಗ್ ಪರಿಸರಕ್ಕೆ ಮಾಲಿನ್ಯಕಾರಕವೆನಿಸುವ ಸುಮಾರು 2,500 ಸಂಸ್ಥೆಗಳ ಮುಚ್ಚುಗಡೆಗೆ ನಿರ್ಧರಿಸಿದೆ.
ಬೀಜಿಂಗ್‌ನಲ್ಲಿ ಇತ್ತೀಚೆಗೆ ಗರಿಷ್ಠ ಮಟ್ಟಕ್ಕೆ ತಲುಪಿರುವ ವಾಯುಮಾಲಿನ್ಯ, ದಟ್ಟ ಹೊಗೆಯನ್ನು ಪರಿಗಣಿಸಿ ಪರಿಸರ ಸಂರಕ್ಷಣೆಯ ಯತ್ನವಾಗಿ ಹಾಗೂ 2016ರಲ್ಲಿ ವಾಯುಮಾಲಿನ್ಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
Next Story