ಸೇನೆಯ ಕರ್ನಲ್‌ಗೆ ಅಡುಗೆಯಾಳಿನ ಗುಂಡೇಟು
ಇಂಫಾಲ,ಜ.9: ಮಣಿಪುರದ ಲೋಕತಕ್ ಸರೋವರದ ಬಳಿಯ ಸೆಂದ್ರಾದಲ್ಲಿನ ಶಿಬಿರದಲ್ಲಿ ಶನಿವಾರ ಬೆಳಗ್ಗೆ ಅಡುಗೆಯಾಳು ತನ್ನ ಎಕೆ 47 ರೈಫಲ್‌ನಿಂದ ಗುಂಡುಗಳನ್ನು ಹಾರಿಸಿದ ಪರಿಣಾಮ ಸಿಖ್ಸ್ ಅಸ್ಸಾಂ ರೈಫಲ್ಸ್‌ನ ಕಮಾಂಡಿಂಗ್ ಅಧಿಕಾರಿ ಗಾಯಗೊಂಡಿದ್ದಾರೆ. ಕರ್ನಲ್ ನೀರಜ್ ಅವರ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಸ್ಥಳದಲ್ಲಿದ್ದ ಇತರ ಯೋಧರು ಅಡುಗೆಯಾಳಿನ ಮೇಲೆ ಮುಗಿಬಿದ್ದು ಆತನನ್ನು ನಿಶ್ಶಸ್ತ್ರಗೊಳಿಸಿದರಾದರೂ ಅಷ್ಟರಲ್ಲಾಗಲೇ ಆತ ರೈಫಲ್‌ನಲ್ಲಿದ್ದ ಅಷ್ಟೂ ಗುಂಡುಗಳನ್ನು ಹಾರಿಸಿದ್ದ.
ಶುಕ್ರವಾರ ರಾತ್ರಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.
ಸೇನೆಯು ಘಟನೆಯ ಕುರಿತು ವಿಚಾರಣೆಗೆ ಆದೇಶಿಸಿದೆ.
Next Story





