ಕೆರೆಗೆ ಬಿದ್ದು ಮೃತ್ಯು
ಬಂಟ್ವಾಳ, ಜ.9: ವ್ಯಕ್ತಿಯೊಬ್ಬರು ಪಂಪ್ ರಿಪೇರಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಪುಣಚ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ. ಪುಣಚ ಗ್ರಾಮದ ಅಜ್ಜಿನಡ್ಕ ಸಮೀಪದ ಕದಳಿವನ ನಿವಾಸಿ ಐತಪ್ಪ (50) ಮೃತಪಟ್ಟವರು. ಕೆಟ್ಟು ಹೋದ ತೋಟದ ಪಂಪ್‌ನ್ನು ದುರಸ್ತಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
Next Story





