ಬೆಳ್ತಂಗಡಿ: ಎಂಡೋ ಸಂತ್ರಸ್ತರಿಗೆ ಸವಲತ್ತುಗಳ ವಿತರಣೆ

ಬೆಳ್ತಂಗಡಿ, ಜ.9: ಎಂಡೋಸಲಾನ್ ಬಾತ ಬೆಳ್ತಂಗಡಿ, ಮಂಗಳೂರು ತಾಲೂಕಿನ 344 ಸಂತ್ರಸ್ತರಿಗೆ ಗುರುತಿನಚೀಟಿ, ಇತರ ಸಲಕರಣೆಗಳನ್ನು ಹಾಗೂ ಅರ್ಹರಿಗೆ ಸುಮಾರು 3 ಲಕ್ಷ ರೂ. ಮೌಲ್ಯದ ಗಾಲಿಕುರ್ಚಿ ಮತ್ತು 2 ವಾಹನಗಳ ವಿತರಣೆ ಕಾರ್ಯಕ್ರಮ ನಾರಾವಿ ಲಯನ್ಸ್ ಕ್ಲಬ್ ವತಿಯಿಂದ ನಾರಾವಿ ಹಿ.ಪ್ರಾ. ಶಾಲೆಯಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ 28 ಲಾನುಭವಿಗಳಿಗೆ ಗಾಲಿಕುರ್ಚಿಗಳನ್ನು ವಿತರಿಸಿ ಮಾತನಾಡಿದ ಶಾಸಕ ಕೆ.ವಸಂತ ಬಂಗೇರ, ಸಂತ್ರಸ್ತರು ಎಲ್ಲರಂತೆ ಜೀವಿಸಲು ಸರಕಾರ ಬೇಕಾದ ವ್ಯವಸ್ಥೆಯನ್ನು ಮಾಡಿದೆ. ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ 121 ಮಂದಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗಿದೆ. ಶೇ.60ಕ್ಕಿಂತ ಹೆಚ್ಚು ವಿಕಲಾಂಗತೆಯನ್ನು ಹೊಂದಿರುವವರಿಗೆ 3,000, ಶೇ.25ರಿಂದ59ರೊಳಗೆ ವಿಕಲಾಂಗತೆಯನ್ನು ಹೊಂದಿರುವವರಿಗೆ ರೂ.1,500 ಮಾಸಾಶನ ಹಾಗೂ ಸಂತ್ರಸ್ತ ಕುಟುಂಬದ ಇಬ್ಬರಿಗೆ ಬಸ್‌ಪಾಸ್‌ನ್ನು ಸರಕಾರ ಕಲ್ಪಿಸಿದೆ ಎಂದರು.
ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಸಂತ್ರಸ್ತರಿಗೆ ಗುರುತಿನ ಚೀಟಿಗಳನ್ನು ವಿತರಿಸಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಕವಿತಾ ಶಾಸಿ 344 ಮಂದಿಗೆ ಕಿಟ್‌ಗಳನ್ನು ವಿತರಿಸಿದರು.
28 ಸಂತ್ರಸ್ತರಿಗೆ ತಾಪಂ ಅಧ್ಯಕ್ಷೆ ಜಯಂತಿ ಪಾಲೇದು ವಾಟರ್ ಬೆಡ್‌ಗಳನ್ನು ಹಸ್ತಾಂತರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಕಾರಿ ಡಾ.ರಾಮಕೃಷ್ಣ ರಾವ್ ಸಂತ್ರಸ್ತರಿಗೆ ಸಿಗುವ ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಎಂಡೋಸಲಾನ್ ನೋಡೆಲ್ ಅಕಾರಿ ಡಾ.ಅರುಣ್‌ಕುಮಾರ್ ಸಂತ್ರಸ್ತರ ಬಗ್ಗೆ ಮಾಹಿತಿ ನೀಡಿದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪ್ರವೀಣ್‌ಕುಮಾರ್ ಇಂದ್ರ, ನಾರಾವಿ ಗ್ರಾಪಂ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು, ಗಂಗಾರತ್ನಾ ವಸಂತ, ಜಿಲ್ಲಾ ವಿಕಲಚೇತನ ಶಾಲಾ ಸದಸ್ಯ ಪಿ.ಎಸ್.ಪ್ರಭಾಕರ್, ಬೆಳ್ತಂಗಡಿಯ ನೋಟರಿ ಮುರಳಿ ಬಿ., ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸಿ.ಕೆ.ಚಂದ್ರಕಲಾ, ತಾಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಜಯಂತ ಕೋಟ್ಯಾನ್, ತಾಲೂಕು ಆರೋಗ್ಯಾಕಾರಿ ಡಾ.ಕಲಾಮಧು, ಶಾಲಾ ಮುಖ್ಯೋಪಾಧ್ಯಾಯ ಶೀನ ನಾಯ್ಕ, ಎಪಿಎಂಸಿ ಅಧ್ಯಕ್ಷ ಧರಣೇಂದ್ರಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಶ್ರೀನಿವಾಸ ಕಿಣಿ, ಮಂಗಳೂರು ತಾಲೂಕು ಆರೋಗ್ಯಾಕಾರಿ ಡಾ.ನವೀನ್‌ಚಂದ್ರಕುಲಾಲ್ ವೇದಿಕೆಯಲ್ಲಿದ್ದರು.
ವೇಣೂರು, ಅಳದಂಗಡಿ, ಬೆಳ್ತಂಗಡಿ, ಶಿರ್ತಾಡಿ, ್ರೆಂಡ್ಸ್ ಕ್ಲಬ್ ಹೊಸಂಗಡಿ, ದ.ಕ.ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ, ನಾಗರಿಕ ಸೇವಾ ಸಮಿತಿ ಗುರುವಾಯನಕೆರೆ, ಹಾಗೂ ನಾರಾವಿ ಗ್ರಾಪಂಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಂಗಳೂರಿನ ಯೆನೆಪೊಯ ಆಸ್ಪತ್ರೆಯ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಕ್ಷಕ ಧರಣೇಂದ್ರಕುಮಾರ್ ಕಾರ್ಯಕ್ರಮ ನಿರ್ವ ಹಿಸಿದರು. ಲಯನ್ಸ್ ಕ್ಲಬ್ ನಾರಾವಿ ಅಧ್ಯಕ್ಷ ರಾಮಚಂದ್ರ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಧನಂಜಯ ಕುಮಾರ್ ವಂದಿಸಿದರು.







