‘ಅಲ್‌ಮದೀನಾ’ದಲ್ಲಿ ಹುಬ್ಬುರ್ರಸೂಲ್ ಕಾನರೆನ್ಸ್

ಉಳ್ಳಾಲ, ಜ.9: ಮಂಜನಾಡಿಯ ಅಲ್ ಮದೀನಾ ದಲ್ಲಿ ಹುಬ್ಬುರ್ರಸೂಲ್ ಜಲ್ಸಾ ಕಾರ್ಯಕ್ರಮ ಶುಕ್ರವಾರ ಜರಗಿತು, ಮುಖ್ಯ ಭಾಷಣ ಮಾಡಿದ ರಫೀಕ್ ಸಅದಿ ದೇಲಂಪಾಡಿ ಲೋಕಕ್ಕೆ ಇಸ್ಲಾಂನ ಸಂದೇಶವನ್ನು ಸಾರಿ ಕಗ್ಗತ್ತಲಿನಲ್ಲಿದ್ದ ಜನರನ್ನು ಬೆಳಕಿಗೆ ತಂದ ಪ್ರವಾದಿಯವರನ್ನು ಸ್ಮರಿಸುವ ಕೆಲಸ ನಾವು ನಿರಂತರವಾಗಿ ಮಾಡಬೇಕು ಹೇಳಿದರು.
ಅಲ್ ಮದೀನ ಅಧ್ಯಕ್ಷ ಅಬ್ಬಾಸ್ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಸ್ಸೆಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಳ್ ಸ್ವಲಾತ್ ಮತ್ತು ದುಆ ನೇತೃತ್ವ ವಹಿ ಸಿದ್ದರು. ಇದೇ ವೇಳೆ ಅಲ್ ಮದೀನ ಮುದರ್ರಿಸ್ ಅಬ್ದುಲ್ ಅಝೀಝ್ ಅಹ್ಸನಿ ಅಧ್ಯಕ್ಷತೆಯಲ್ಲಿ ಅನ್ವರ್ ಮರ್ಝೂಕಿ ಮತ್ತು ತಂಡದವರಿಂದ ಬುರ್ದಾ ಮಜ್ಲಿಸ್ ನಡೆಯಿತು. ಅಬ್ದುಸ್ಸಲಾಂ ದಾರಿಮಿ ಉದ್ಘಾಟಿಸಿದರು. ಬಳಿಕ ಹಾಜಿ ಮುಹಮ್ಮದ್ ಕುಂಞಿ ಮುಸ್ಲಿಯಾರ್ ತಳಿಪರಂಬು ನೇತೃತ್ವದಲ್ಲಿ ಮೌಲೀದ್ ಪಾರಾಯಣ ನಡೆಯಿತು. ವೇದಿಕೆಯಲ್ಲಿ ಅಬ್ದುರ್ರಹ್ಮಾನ್ ಅಹ್ಸನಿ, ಸಿದ್ದೀಕ್ ಸಖಾಫಿ ಪಾನೇಲ, ಸೈಯದ್ ಇಸ್ಮಾಯೀಲ್ ಅಲ್‌ಹಾದಿ ತಂಳ್, ಅಲ್ ಮದೀನ ಖತೀಬ್ ಮುಹಮ್ಮದ್ ಕುಂಞಿ ಅಮ್ಜದಿ,ಅಲ್ ಮದೀನ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಪ್ರಾಂಶುಪಾಲ ಯೂನುಸ್ ಅಹ್ಸನಿ, ಸದ್‌ರ್ ಅಬೂಬಕರ್ ಮದನಿ ಪಡಿಕ್ಕಲ್, ಕಬೀರ್ ಸಅದಿ ವೇಣೂರು, ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಸಿದ್ದೀಕ್ ಅಹ್ಸನಿ, ಆಲಿಕುಂಞಿ ಪಾರೆ ಮತ್ತಿತರರು ಉಪಸ್ಥಿತರಿದ್ದರು. ಅಲ್ ಮದೀನ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು.





