ಇಂದು ಪಡ್ಪಿನಂಗಡಿಯಲ್ಲಿ ಆರೋಗ್ಯ ಮೇಳ
ಪುತ್ತೂರು, ಜ.9: ದ.ಕ. ಜಿಲ್ಲಾ ಯು.ಟಿ.ಖಾದರ್ ಅಭಿಮಾನಿ ಬಳಗ, ಕಲ್ಮಡ್ಕದ ಸ್ಪಂದನಾ ರೈತ ಸೇವಾ ಕೂಟ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಜೆಸಿಐ ಪಂಜ ಪಂಚಶ್ರೀ, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ದೇರಳಕಟ್ಟೆ, ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಇವುಗಳ ಸಹಯೋಗದಲ್ಲಿ ಪಂಜ ಪಡ್ಪಿನಂಗಡಿ ಶಿವಗೌರಿ ಕಲಾಮಂದಿರದಲ್ಲಿ ಜ.10ರಂದು ಆರೋಗ್ಯ ಮೇಳ ನಡೆಯಲಿದ್ದು, , ಈ ಸಂದರ್ಭ ಉಚಿತ ಆರೋಗ್ಯತಪಾಸಣೆ ಮತ್ತು ಕಣಚೂರು ಕ್ಯಾಂಪ್‌ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಯು.ಟಿ.ಖಾದರ್ ಅಭಿಮಾನಿ ಬಳಗ ಅಧ್ಯಕ್ಷ ಇಸ್ಮಾಯೀಲ್ ಪಡ್ಪಿನಂಗಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಯು.ಟಿ. ಖಾದರ್ ಅಭಿಮಾನಿ ಬಳಗದ ಸದಸ್ಯರಾದ ಸಾದಿಕ್ ಬರೆಪ್ಪಾಡಿ, ಬಾತೀಶ್‌ಆತೂರು, ಸ್ಪಂದನಾ ಟ್ರಸ್ಟ್ ಸಂಚಾಲಕ ಲೋಕೇಶ್ ಆಕ್ರಿಕಟ್ಟೆ ಉಪಸ್ಥಿತರಿದ್ದರು.
Next Story





