ನಿವೇಶನರಹಿತರ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಸೂಚನೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿವೇಶನ ಕೋರಿ ಬಂದಿರುವ ಅರ್ಜಿಗಳ ಪರಿಶೀಲನೆ ಮಾಡಿ ಪ್ರಥಮ ಹಂತದಲ್ಲಿ ನಿವೇಶನ ರಹಿತರ ಪಟ್ಟಿ ತಯಾರಿಸಲಾಗಿದ್ದು, ಈ ಪಟ್ಟಿಗಳನ್ನು ನಗರಸಭಾ ವ್ಯಾಪ್ತಿಯ ಎಲ್ಲಾ ಗ್ರಾಮಕರಣಿಕರ ಕಚೇರಿ, ನಗರಸಭಾ ಉಪ ಕಚೇರಿ, ನಗರಸಭಾ ಕಚೇರಿ, ತಾಲೂಕು ಕಚೇರಿ, ತಾಪಂ ಕಚೇರಿ ಹಾಗೂ ಶಾಸಕರ ಕಚೇರಿಯ ನೋಟಿಸ್ ಬೋರ್ಡ್‌ಗಳಲ್ಲಿ ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ.
ಪಟ್ಟಿಯಲ್ಲಿ ಹೆಸರು ದಾಖಲಿಸಿರುವವರ ಹೆಸರಿನಲ್ಲಿ ಅಥವಾ ಅವರ ಅವಲಂಬಿತ ಕುಟುಂಬಿಕರ ಹೆಸರಿನಲ್ಲಿ ಯಾವುದಾದರು ಗ್ರಾಮದಲ್ಲಿ ನಿವೇಶನ/ ಮನೆ ಇದೆಯೇ ಎಂಬುದರ ಬಗ್ಗೆ ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಅರ್ಹ ನಿವೇಶನ ರಹಿತರಿಗೆ ನಿವೇಶನ ನೀಡುವ ಉದ್ದೇಶದಿಂದ ಅರ್ಹ ಫಲಾನುಭವಿಗಳ ಆಯ್ಕೆಯಲ್ಲಿ ಸಹಕರಿಸುವಂತೆ ಹಾಗೂ ಆಕ್ಷೇಪಣೆಗಳನ್ನು ಫೆ.5ರೊಳಗೆ ಪೌರಾಯುಕ್ತರು, ಉಡುಪಿ ನಗರಸಭೆ ಇವರಿಗೆ ಲಿಖಿತವಾಗಿ ಅಥವಾ ನಗರಸಭಾ ಸಾರ್ವಜನಿಕ ದೂರು ಸ್ವೀಕೃತಿ www.udupicity.gov.inಗೆ ನೀಡಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





