ಉಡುಪಿ: ಬ್ಯಾಂಕ್ ನೌಕರರ ಮುಷ್ಕರ
ಉಡುಪಿ, ಜ.9: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ದೇಶಾದ್ಯಂತ ಹಮ್ಮಿಕೊಂಡ ಮುಷ್ಕರದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘ ಉಡುಪಿ ಕೆ.ಎಂ.ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನ ಕೆಥೊಲಿಕ್ ಸೆಂಟರ್ ಎದುರು ಮತ ಪ್ರದರ್ಶನ ನಡೆಸಿತು.
ಹತ್ತನೆಯ ದ್ವಿಪಕ್ಷೀಯ ಒಪ್ಪಂದದ ಉಲ್ಲಂಘನೆ, ಸ್ಟೇಟ್ ಬ್ಯಾಂಕಿನ ಸಹವರ್ತಿ ಬ್ಯಾಂಕ್‌ಗಳಲ್ಲಿ ಸೇವಾ ನಿಯಮಗಳ ಉಲ್ಲಂಘನೆಯ ವಿರುದ್ಧ ನಡೆಸಿದಮತಪ್ರದರ್ಶನವನ್ನು ಉದ್ದೇಶಿಸಿಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ರಾಮಮೋಹನ್, ಪ್ರಧಾನ ಕಾರ್ಯದರ್ಶಿಹೆರಾಲ್ಡ್ ಡಿಸೋಜ ಮಾತನಾಡಿದರು.
ಈ ಸಂದರ್ಭ ಕೆನರಾ ಬ್ಯಾಂಕ್‌ನ ವರದರಾಜ, ಸ್ಟೇಟ್‌ಬ್ಯಾಂಕ್ ಆಫ್ ಮೈಸೂರಿನ ನಾರಾಯಣ ಭಟ್, ಕರ್ಣಾಟಕ ಬ್ಯಾಂಕ್‌ನ ದಯಾನಂದ, ವಿಜಯ ಬ್ಯಾಂಕ್‌ನ ವಿಜಯ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯಲ್ಲೂ ಎಲ್ಲ ಬ್ಯಾಂಕ್‌ಗಳು ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದವು.
Next Story





