ಭಾರತ- ಪಾಕ್ ಮಾತುಕತೆ ಖಚಿತ: ಸರ್ತಾಜ್ ಅಝೀಝ್

ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ನಿಗದಿಯಂತೆ ನಡೆಯಲಿದೆ ಎಂದು ಪ್ರಧಾನಿ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಝೀಝ್ ಪ್ರಕಟಿಸಿದ್ದಾರೆ.
ಜನವರಿ 15ರಂದು ಮಾತುಕತೆಗೆ ದಿನ ನಿಗದಿಯಾಗಿದೆ ಎಂದು ಅವರು ಹೇಳಿದ್ದಾರೆ. ಪಠಾಣ್‌ಕೋಟ್ ದಾಳಿ ಬಗ್ಗೆ ಭಾರತ ನೀಡಿದ ಸುಳಿವಿನ ಬಗ್ಗೆ ಪಾಕಿಸ್ತಾನ ಕಾರ್ಯಪ್ರವೃತ್ತವಾಗಿದೆ. ದಾಳಿ ಘಟನೆ ಬಗ್ಗೆ ಪಾಕಿಸ್ತಾನ ಮಹತ್ವದ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
ಶನಿವಾರ ಸಂಜೆ ಲಾಹೋರ್ ನ್ಯಾಷನಲ್ ಕಲಾ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಈ ವಿಷಯ ಪ್ರಕಟಿಸಿದರು. ಆದರೆ ತನಿಖೆ ಪ್ರಗತಿ ಬಗೆಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ಅಜೀಜ್ ಅವರ ಹೇಳಿಕೆ, ಸಂಧಾನ ಮಾತುಕತೆಯನ್ನು ಮುಂದುವರಿಸಲು ಇಸ್ಲಾಮಾಬಾದ್‌ಗೆ ಇರುವ ಉತ್ಸಾಹವನ್ನು ತೋರಿಸುತ್ತದೆ ಎಂದು ಇಸ್ಲಾಮಾಬಾದ್‌ನ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಭಾರತದ ನೀಡಿದ ಸುಳಿವಿನ ಬಗ್ಗೆ ನಿಗದಿತ ಕಾಲಮಿತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.





