ಬಿರುಸು ಪಡೆದ ಶ್ರೀನಗರ ರಾಜಕೀಯ

ಶ್ರೀನಗರ: ತಂದೆ ನಿಧನದ ಬಳಿಕ ನಾಲ್ಕು ದಿನಗಳ ಶೋಕಾಚರಣೆ (ಚಹುರಮ್) ಮುಗಿಯುವ ಮುನ್ನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದಿಲ್ಲ ಎಂಬ ನಿಲುವಿಗೆ ಮೆಹಬೂಬ ಮುಫ್ತಿ ಬದ್ಧರಾಗಿದ್ದು, ಇದು ಹೊಸ ರಾಜಕೀಯ ಮೈತ್ರಿ ಸೇರಿದಂತೆ ಹಲವು ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿದೆ.
ಉಭಯ ಪಕ್ಷಗಳ ನಡುವಿನ ಮೈತ್ರಿ ಗಾಢವಾಗಿದೆ ಎಂದು ಬಿಜೆಪಿ ಹೇಳಿಕೊಂಡಿರುವ ನಡುವೆಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರು ಮೆಹಬೂಬ ಭೇಟಿಗೆ ಮುಂದಾಗಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ. ಇದೇ ವೇಳೆ ವಿರೋಧ ಪಕ್ಷಗಳು ಕೂಡಾ ಪರಿಸ್ಥಿತಿಯ ಲಾಭ ಪಡೆಯಲು ಕಾರ್ಯತಂತ್ರ ಹೆಣೆಯುತ್ತಿವೆ.
"ತಮ್ಮ ನಿಲುವಿಗೆ ಬದ್ಧರಾಗುವ ಮೂಲಕ ಮೆಹಬೂಬ ಧಾರ್ಮಿಕ ಶ್ರದ್ಧೆ ಮೆರೆದಿದ್ದಾರೆ. ಯಾವುದಕ್ಕೂ ಆತುರವಿಲ್ಲ. ಮುಫ್ತಿ ಮಹ್ಮದ್ ಸಯೀದ್ ಅವರು ಬಿಜೆಪಿ ಜತೆ ಮೈತ್ರಿ ಸರ್ಕಾರ ರಚಿಸಲು ಕೂಡಾ ಯಾವ ತರಾತುರಿ ನಿರ್ಧಾರವನ್ನೂ ಕೈಗೊಂಡಿರಲಿಲ್ಲ. ತಂದೆಯಂತೆ ಮಗಳು" ಎಂದು ಪಿಡಿಪಿ ಹಿರಿಯ ಮುಖಂಡರು ವಿಶ್ಲೇಷಿಸುತ್ತಿದ್ದಾರೆ.
Next Story





