ನರ್ಸ್ ಮೈ ಮುಟ್ಟಿದ ರೋಗಿಯನ್ನು ಥಳಿಸಿ ಕೊಂದ ವೈದ್ಯ

ಮಾಸ್ಕೊ, ಜ.10: ಆಸ್ಪತ್ರೆಯೊಂದರಲ್ಲಿ ನರ್ಸ್‌ನ ಮೈ ಮುಟ್ಟಿದ ಕಾರಣಕ್ಕಾಗಿ ರೋಗಿಯನ್ನು ಸ್ಥಳದಲ್ಲೇ ಥಳಿಸಿ ಕೊಂದ ಘಟನೆ ರಷ್ಯಾದ ಬೆಲ್‌ಗೋರ್ಡ್‌ನ ಆಸ್ಪತ್ರೆಯೊಂದರಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ವೈದ್ಯನ ರೌದ್ರಾವತಾರ ದಾಖಲಾಗಿದೆ.
ರಾಜಧಾನಿ ಮಾಸ್ಕೋ ನಗರದಿಂದ 670 ಕಿ.ಮೀ ದೂರದಲ್ಲಿರುವ ಬೆಲ್‌ಗೋರ್ಡ್ ಆಸ್ಪತ್ರೆಯಲ್ಲಿ ಡಿ.29ರಂದು ಈ ಘಟನೆ ನಡೆದಿದ್ದು, ರೋಗಿಗೆ ವೈದ್ಯ ಹೊಡೆಯುತ್ತಿರುವ ವೀಡಿಯೊ ಸಾಮಾಜಿಕ ಮಧ್ಯಮಗಳಲ್ಲಿ ಹರಿದಾಡತೊಡಗಿದೆ.
ಬೆಲ್‌ಗೋರ್ಡ್ ನಿವಾಸಿ ಯೆವ್ಗೇನಿ ಬ್ಯಾಕ್ಟೀನ್ (56) ನರ್ಸ್‌ನ ಮೈ ಮುಟ್ಟಿದ ಆರೋಪದಲ್ಲಿ ವೈದ್ಯನ ಕೈಗೆ ಸಿಕ್ಕಿ ಮೃತಪಟ್ಟ ರೋಗಿ. ಇಲ್ಯಾ ಝೆಲೆನ್ಡಿನಾವ್ ರೋಗಿಯನ್ನು ಥಳಿಸಿ ಕೊಂದ ಅರೋಪಿ ಎಂದು ಖಾಸಗಿ ಟಿವಿ ವಾಹಿನಿ ರೆನ್ ವರದಿ ಮಾಡಿದೆ.
Next Story