ದಿಲ್ಲಿ: ಭಿಕ್ಷುಕರು-ಚಿಂದಿ ಆಯುವವರಿಗೆ ಶೀಘ್ರವೇ ಶೌಚಾಲಯ ಮೇಲ್ವಿಚಾರಣೆ ಹೊಣೆ
ಹೊಸದಿಲ್ಲಿ, ಜ.10: ಭಿಕ್ಷುಕರು ಹಾಗೂ ಚಿಂದಿ ಆಯುವವರ ಸಬಲೀಕರಣಕ್ಕೆ ಎನ್‌ಡಿಎಂಸಿ ವಿಶೇಷ ಕ್ರಮವೊಂದನ್ನು ಆರಂಭಿಸಲು ಚಿಂತನೆ ನಡೆಸಿದ್ದು, ಶೀಘ್ರವೇ ಅವರು ರಾಷ್ಟ್ರ ರಾಜಧಾನಿ ದಿಲ್ಲಿಯ ಶೌಚಾಲಯ ಸಂಕೀರ್ಣಗಳ ಮೇಲ್ವಿಚಾರಣೆ ನೋಡಿಕೊಳ್ಳುವ ಸಾಧ್ಯತೆಯಿದೆ.
‘ಆತ್ಮ ನಿರ್ಭರ್’ (ಸ್ವಾವಲಂಬನೆ) ಯೀಜನೆಯನ್ವಯ ಹೊಸದಿಲ್ಲಿ ಮಹಾನಗರ ಪಾಲಿಕೆಯು (ಎನ್‌ಡಿಎಂಸಿ) ಭಿಕ್ಷುಕರು ಹಾಗೂ ಚಿಂದಿ ಆಯುವವರ ಸಹಕಾರ ಸಂಘ ರಚನೆಗೆ ಸಾಂಸ್ಥಿಕ ಸಹಕಾರ ಒದಗಿಸಲಿದೆಯೆಂದು ಎನ್‌ಡಿಎಂಸಿಯ ಪರಿಸರ ಪ್ರಬಂಧದ ಸೇವೆಗಳ ಇಲಾಖೆಯ (ಡಿಇಎಂಎಸ್) ಸಮಿತಿಯ ಅಧ್ಯಕ್ಷ ವಿಜಯ ಪ್ರಕಾಶ್ ಪಾಂಡೆ ತಿಳಿಸಿದ್ದಾರೆ.
Next Story





