ದಿಲ್ಲಿಯಲ್ಲಿ ತ್ರಿವಳಿ ಕೊಲೆ
ಹೊಸದಿಲ್ಲಿ, ಜ.10: ಒಂದೇ ಕುಟಂಬದ ಮೂವರನ್ನು ಕೊಲೆಗೈದ ಘಟನೆ ರವಿವಾರ ಮುಂಜಾನೆ ರಾಜಧಾನಿ ದಿಲ್ಲಿಯಲ್ಲಿ ಬೆಳಕಿಗೆ ಬಂದಿದೆ.
ಹಳೆಯ ರಾಜೇಂದ್ರನಗರ ಪ್ರದೇಶದ ಫ್ಲಾಟೊಂದರ ಮೂರನೆಯ ಅಂತಸ್ತಿನಲ್ಲಿ 48ರ ಹರೆಯದ ಮಹಿಳೆ ಹಾಗೂ ಆಕೆಯ 25ರ ಹರೆಯದ ಪುತ್ರನ ಮೃತದೇಹಗಳು ಕಂಡು ಬಂದರೆ, ಆಕೆಯ ಗಂಡನ ಮೃತದೇಹ ಬಳಿಕ ಕಪಾಟೊಂದರಲ್ಲಿ ಪತ್ತೆಯಾಗಿದೆ.
ಈ ತ್ರಿವಳಿ ಕೊಲೆಗಳಲ್ಲಿ, ಸಂಜಯ್, ಅವರ ಪತ್ನಿ ಜ್ಯೋತಿ, ಹಾಗೂ ಪುತ್ರ ಪವನ್‌ನನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ. ಕೊಲೆಯ ಹಿಂದಿನ ಕಾರಣದ ಬಗ್ಗೆ ತಾವು ತನಿಖೆ ನಡೆಸುತ್ತಿದ್ದೇವೆ. ಅವರನ್ನು ನಿನ್ನೆ ಸಂಜೆ ಕೊಂದಿರುವ ಸಾಧ್ಯತೆಯಿದೆ. ಕೊಲೆಗಳ ಬಗ್ಗೆ ಮಾಹಿತಿ ಇಂದು ಬೆಳಗ್ಗೆ ತಮಗೆ ಬಂದಿತು. ಮಧ್ಯ ವಲಯದ ಜಂಟಿ ಪೊಲೀಸ್ ಆಯುಕ್ತ ಎಸ್.ಕೆ.ಗೌತಂ ತಿಳಿಸಿದ್ದಾರೆ.
Next Story





