ವಸ್ತ್ರ ಸಂಹಿತೆ ಉಲ್ಲಂಘನೆ: ಉಮರ್ ಅಕ್ಮಲ್‌ಗೆ ಒಂದು ಪಂದ್ಯ ನಿಷೇಧ

ಕರಾಚಿ, ಜ.10: ಇತ್ತೀಚೆಗೆ ದೇಶೀಯ ಪಂದ್ಯವೊಂದರಲ್ಲಿ ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿರುವ ಡ್ಯಾಶಿಂಗ್ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್‌ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಂದು ಪಂದ್ಯದಿಂದ ನಿಷೇಧ ಹೇರಲು ನಿರ್ಧರಿಸಿದೆ.
ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಿರುವ ಉಮರ್ ಜ.15 ರಂದು ಆಕ್ಲೆಂಡ್‌ನಲ್ಲಿ ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಲಭ್ಯವಿರುವುದಿಲ್ಲ ಎಂದು ಟೀಮ್ ಮ್ಯಾನೇಜರ್ ಇಂತಿಕಾಬ್ ಆಲಂ ಹೇಳಿದ್ದಾರೆ.
23ರ ಹರೆಯದ ಉಮರ್ ದೇಶೀಯ ಪಂದ್ಯವನ್ನು ಆಡುವಾಗ ವಸ್ತ್ರಸಂಹಿತೆಯನ್ನು ಉಲ್ಲಂಘಿಸಿದ್ದರು. ಪಿಸಿಬಿ ಮ್ಯಾಚ್ ರೆಫರಿ ಅನ್ವರ್ ಖಾನ್ ಈ ಕುರಿತು ಎರಡು ಬಾರಿ ಎಚ್ಚರಿಕೆ ನೀಡಿದರೂ ನಿರ್ಲಕ್ಷ ಧೋರಣೆ ತಾಳಿದ್ದರು ಎನ್ನಲಾಗಿದೆ. ಪ್ರತಿಭಾವಂತ ದಾಂಡಿಗ ಉಮರ್ ಅಕ್ಮಲ್ ವೃತ್ತಿಜೀವನದಲ್ಲಿ ಹಲವು ಬಾರಿ ಅಶಿಸ್ತಿನ ವರ್ತನೆ ತೋರಿದ್ದಾರೆ.
Next Story





