Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಜ್ಞಾನದ ಹೆಸರಿನಲ್ಲಿ ಅಜ್ಞಾನದ ಅಟ್ಟಹಾಸ

ವಿಜ್ಞಾನದ ಹೆಸರಿನಲ್ಲಿ ಅಜ್ಞಾನದ ಅಟ್ಟಹಾಸ

ಸನತ್ ಕುಮಾರ‍್ ಬೆಳಗಲಿಸನತ್ ಕುಮಾರ‍್ ಬೆಳಗಲಿ10 Jan 2016 11:14 PM IST
share

ಅಜ್ಞಾನ, ಅವಿವೇಕಗಳ ಈ ಅಟ್ಟಹಾಸದ ವಿರುದ್ಧ ಹೊಸ ಪೀಳಿಗೆಯನ್ನು ಜಾಗೃತಗೊಳಿಸಬೇಕಾಗಿದೆ. ಆದರೆ ವಿಷಾದದ ಸಂಗತಿ ಅಂದರೆ ಇಪ್ಪತ್ತೈದರೊಳಗಿನ ಯುವಕರನ್ನು ತಲುಪಲು ಪ್ರಗತಿಪರ ವಿಚಾರವಾದಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ನಾವು ಆಗಾಗ ನಡೆಸುವ ಸಮಾವೇಶಗಳಲ್ಲಿ ನಾವು ನಾವೇ ಪರಸ್ಪರರು ಭೇಟಿಯಾಗುತ್ತೇವೆಯೇ ಹೊರತು ಹೊಸಬರು ಬರುತ್ತಿಲ್ಲ. ಈ ನಿಟ್ಟಿನಲ್ಲಿ ವೈಚಾರಿಕ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಾಗಿದೆ.

ಜೀವ ಸೃಷ್ಟಿಯ ವಿಕಾಸದಲ್ಲಿ ಮಂಗನಿಂದ ಮಾನವನಾದ ಬೆಳವಣಿಗೆಯ ಹಂತಗಳನ್ನು ಓದುತ್ತೇವೆ. ಈ ಸಹಜ ಪ್ರಕ್ರಿಯೆ ಒಂದು ಹಂತ ತಲುಪಿರುವ ಈ ಕಾಲಘಟ್ಟದಲ್ಲಿ ಮನುಷ್ಯನನ್ನು ಮತ್ತೆ ಮಂಗನನ್ನಾಗಿ ಮಾಡುವ ಅವಿವೇಕಿ ಚಟುವಟಿಕೆಗಳು ಮನುಷ್ಯನಿಂದಲೇ ನಡೆಯುತ್ತಿವೆ. ಇತಿಹಾಸದ ಗಾಲಿಗಳನ್ನು ಶಿಲಾಯುಗದತ್ತ ಕೊಂಡೊಯ್ಯುವ ಕ್ರಿಯೆಗಳು ಧರ್ಮದ ಹೆಸರಿನಲ್ಲಿ ಭರದಿಂದ ಸಾಗಿರುವ ಈ ದಿನಗಳಲ್ಲಿ ಒಂದೆಡೆ ಆಧುನಿಕ ಆವಿಷ್ಕಾರಗಳಾಗುತ್ತಿದ್ದರೆ ಇನ್ನೊಂದೆಡೆ ನರನನ್ನು ವಾನರನನ್ನಾಗಿ ಮಾಡುವ ಚಟುವಟಿಕೆಗಳು ನಡೆದಿವೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದನಂತರ ಸರಕಾರದಿಂದಲೇ ಹಿಮ್ಮುಖ ಚಲನೆಗೆ ಸಕಲ ಪ್ರೋತ್ಸಾಹ ದೊರಕುತ್ತಿದೆ. ಮಾನವ ಸಂಪನ್ಮೂಲ ಸಚಿವ ಖಾತೆ ಈ ಪ್ರಕ್ರಿಯೆಗೆ ಮೀಸಲಾಗಿಡಲ್ಪಟ್ಟಿದೆ.

ಶಾಲಾ ಪಠ್ಯ ಪುಸ್ತಕಗಳ ಅವಿವೇಕೀಕರಣ ಪ್ರಕ್ರಿಯೆ ಅತ್ಯಂತ ಚುರುಕಾಗಿ ನಡೆದಿದೆ. ನಮ್ಮ ಪ್ರಾಚಿನ ಭಾರತದಲ್ಲಿ ಎಲ್ಲವೂ ಇತ್ತು ಎಂದು ಹೇಳುವ ಭರದಲ್ಲಿ ಬುದ್ಧಿಗೆ ಮಂಕು ಕವಿಯುತ್ತಿದೆ. ಸ್ವತಃ ಪ್ರಧಾನ ಮಂತ್ರಿಗಳೇ ‘‘ನಮ್ಮ ಪ್ರಾಚೀನ ಕಾಲದಲ್ಲಿ ಶಸ್ತ್ರ ಚಿಕಿತ್ಸೆ ಅತ್ಯಂತ ಪ್ರವರ್ಧಮಾನವಾಗಿತ್ತು. ನಮ್ಮ ಋಷಿಗಳು ಗಣಪತಿಯ ಮುಂಡಕ್ಕೆ ಆನೆಯ ರುಂಡವನ್ನು ಜೋಡಿಸಿ ಆಪರೇಶನ್ ಮಾಡಿದ್ದರು’’ ಎಂದು ಹೇಳುವ ಮೂಲಕ ವೈದ್ಯರಲ್ಲಿ ಮಾತ್ರವಲ್ಲ ವಿಜ್ಞಾನಿಗಳಲ್ಲಿ ತಲ್ಲಣ ಉಂಟು ಮಾಡಿದ್ದರು. ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದ್ದಾಗ ಶಾಲಾ ಪಠ್ಯಪುಸ್ತಕಗಳ ಅವಿವೇಕದ ಕಾರ್ಯ ಎಷ್ಟು ವ್ಯಾಪಕವಾಗಿ ನಡೆದು ಹೋಯಿತೆಂದರೆ ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ಈ ಪಠ್ಯ ಪುಸ್ತಕಗಳ ಲೋಪದೋಷಗಳನ್ನು ಸರಿಪಡಿಸಲು ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದರು. ಪಠ್ಯ ಪುಸ್ತಕಗಳ ಈ ಲೋಪ ದೋಷಗಳ ಬಗ್ಗೆ ಶಿಕ್ಷಣ ಉಳಿಸಿ ಕ್ರಿಯಾ ಸಮಿತಿ ವಿವರವಾದ ಪಟ್ಟಿ ತಯಾರಿಸಿ ಬರಗೂರರಿಗೆ ನೀಡಿದೆ. ಹಾಗೆ ಮೋದಿ ಆಡಳಿತದಲ್ಲಿ ಅವಾಂತರಗಳು ಅಲೆಅಲೆಯಾಗಿ ಬರುತ್ತಿದೆ.

ಈ ನಡುವೆ ಮೈಸೂರಿನಲ್ಲಿ ನಡೆದ ವಿಜ್ಞಾನ ಸಮಾವೇಶದಲ್ಲಿ ಮಾತಾಡಿದ ರಾಜ್ಯಪಾಲ ವಜೂಭಾಯಿ ವಾಲಾ ಅವರು ಕರಾವಳಿಯ ಅನೈತಿಕ ಪೊಲೀಸರನ್ನು ನೆನಪಿಗೆ ತಂದಿದ್ದಾರೆ. ಕಾಲೇಜು ವಿದ್ಯಾರ್ಥಿನಿಯರು ಹುಬ್ಬಿನ ಕೂದಲು ಕತ್ತರಿಸಬಾರದು. ಲಿಪ್‌ಸ್ಟಿಕ್ ಹಚ್ಚಿಕೊಳ್ಳಬಾರದು. ತಲೆಕೂದಲು ಕತ್ತರಿಸಿಕೊಳ್ಳಬಾರದು ಎಂದು ಉಪದೇಶ ನೀಡಿದ್ದಾರೆ. ಬಿಜೆಪಿ ಪರಿವಾರದಲ್ಲಿ ಬೆಳೆದ ಅವರಿಂದ ಇಂತಹ ಮಾತುಗಳನ್ನಲ್ಲದೇ ಇನ್ನೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತೀಯ ವಿಜ್ಞಾನ ಸಮಾವೇಶ ಎಂಬ ಹೆಸರಿನಲ್ಲಿ ನಡೆದ ಈ ‘ಅಜ್ಞಾನ’ ಸಮಾವೇಶದಲ್ಲಿ ಪಾಲ್ಗೊಂಡ ಕಾನ್‌ಪುರದ ಐಎಎಸ್ ಅಧಿಕಾರಿಯೊಬ್ಬ ಶಂಖ ಊದುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಪ್ರತಿಪಾದಿಸಿದ. ಅಖಿಲೇಶ್ ಪಾಂಡೆ ಎಂಬ ಇನ್ನೊಬ್ಬ ವಿಜ್ಞಾನಿ ಶಿವ ಶ್ರೇಷ್ಠ ಪರಿಸರವಾದಿ ಎಂದು ಪ್ರತಿಪಾದಿಸಿದ. ಕಳೆದ ವರ್ಷ ನಡೆದ ಮುಂಬೈ ವಿಜ್ಞಾನ ಸಮಾವೇಶದಲ್ಲಿ ಇಂಥದ್ದೇ ಅವಿವೇಕದ ಅಟ್ಟಹಾಸ ನಡೆದಿತ್ತು. ಶಂಖ ಊದುವುದರಿಂದ ಶ್ವಾಸಕೋಶದ ಸ್ನಾಯುಗಳು ಗಟ್ಟಿಯಾಗುತ್ತವೆ. ಬಹುತೇಕ ಮನೋರೋಗಗಳು ವಾಸಿಯಾಗುತ್ತವೆ ಎಂದು ಹೇಳಿದ ರಾಜೀವ್ ಶರ್ಮಾ ‘‘ಇದಕ್ಕೆ ಆಧಾರವನ್ನು ನೀಡಿ’’ ಎಂದು ಪ್ರಶ್ನಿಸಿದರೆ ಉತ್ತರ ನೀಡಲಿಲ್ಲ. ಈ ಪ್ರಬಂಧದಲ್ಲಿನ ಇನ್ನೂ ಅಚ್ಚರಿಯ ಸಂಗತಿ ಅಂದರೆ ಶಂಖ ಊದಿದರೆ ಬಿಳಿ ಕೂದಲು ಕಪ್ಪಾಗುತ್ತದೆ ಎನ್ನುವುದಾಗಿದೆ! ಈ ರೀತಿಯ ಅಂತೆ ಕಂತೆಗಳನ್ನು ವಿಜ್ಞಾನ ಸಮಾವೇಶದಲ್ಲಿ ಧಾರಾಳವಾಗಿ ಪ್ರದರ್ಶಿಸಲಾಗಿದೆ. ಅಖಿಲೇಶ್ ಪಾಂಡೆ ಎಂಬ ಸಂಘಪರಿವಾರದ ವಿಜ್ಞಾನಿಯ ಸಂಶೋಧನೆ ಇನ್ನೂ ಅದ್ಭುತವಾಗಿದೆ. ‘‘ಹುಲಿಯ ಚರ್ಮದ ಮೇಲೆ ಕುಳಿತರೆ ಲೈಂಗಿಕ ಹಸಿವನ್ನು ನಿವಾರಿಸಿಕೊಳ್ಳಬಹುದು’’ ಎಂಬುದು ಇವರ ಪ್ರಬಂಧದ ಪ್ರಮುಖ ಅಂಶ. ಇಂಥ ಅವಿವೇಕಿ ಪ್ರಬಂಧಗಳ ಮಂಡನೆಗೆ ವಿಜ್ಞಾನ ಸಮಾವೇಶದಲ್ಲಿ ಅವಕಾಶ ದೊರಕಿದ್ದು ಅಚ್ಚರಿಯ ಸಂಗತಿಯಾಗಿದೆ. ಅಖಿಲೇಶ್ ಪಾಂಡೆಯವರ ಸಿದ್ಧಾಂತದ ಪ್ರಕಾರ ಹುಲಿಯ ಚರ್ಮದ ಮೇಲೆ ಕುಳಿತರೆ ಲೈಂಗಿಕ ತೃಷೆ ಹಿಂಗುವುದಾದರೆ ನಮ್ಮ ದೇಶದ ಅತ್ಯಾಚಾರಿ ಮನಸ್ಥಿತಿಯವರನ್ನೆಲ್ಲ ಈ ಹುಲಿ ಚರ್ಮದ ಮೇಲೆ ಕೂರಿಸಬಹುದಾಗಿದೆ. ಪುರಾಣ ಪ್ರವಚನಗಳನ್ನು ಕೇಳುವುದು ಗೌರವಿಸುವುದು ಬೇರೆ. ಆದರೆ ಪುರಾಣಗಳನ್ನು ಮುಂದಿಟ್ಟುಕೊಂಡು ವೈಜ್ಞಾನಿಕ ಆವಿಷ್ಕಾರಗಳೆಲ್ಲ ನಮ್ಮ ದೇಶದಲ್ಲಿ ಹಿಂದೆಯೇ ಆಗಿ ಹೋಗಿವೆ ಎಂದು ಹೇಳಿಕೊಳ್ಳುವುದು ಅವಿವೇಕತನದ ಪರಮಾವಧಿಯಾಗುತ್ತದೆ. ವಿಜ್ಞಾನ ಸಮಾವೇಶವನ್ನು ಕೋಮುವಾದೀಕರಣಗೊಳಿಸಲು ಹೊರಟಿರುವ ಸಂಘಪರಿವಾರ ಇದಕ್ಕಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಖಾತೆಯನ್ನು ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಜಾತ್ಯತೀತ ಪಕ್ಷಗಳಿಂದಲೂ ಸರಿಯಾದ ಪ್ರತಿಭಟನೆ ವ್ಯಕ್ತವಾಗುತ್ತಿಲ್ಲ. ಭಾರತದ ಎಲ್ಲವನ್ನೂ ‘ಚಡ್ಡೀಕರಣ’ಗೊಳಿಸಲು ಹೊರಟಿರುವ ಆರೆಸ್ಸೆಸ್ ಮುಖ್ಯವಾಗಿ ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಹೊರಟಿದೆ. ಪುಣೆಯ ಫಿಲಂ ಆ್ಯಂಡ್ ಟೆಲಿವಿಷನ್ ಸಂಸ್ಥೆಯ ಮುಖಸ್ಥರನ್ನಾಗಿ ಗಜೇಂದ್ರ ಚೌಹಾಣ್ ಎಂಬ ಕಳಪೆ ದರ್ಜೆಯ ಧಾರಾವಾಹಿ ಚಡ್ಡಿ ನಟನನ್ನು ನೇಮಕ ಮಾಡಿ ವಿವಾದವನ್ನು ಸೃಷ್ಟಿಸಿದ ಕೇಂದ್ರ ಸರಕಾರ ಅಲ್ಲಿನ ವಿದ್ಯಾರ್ಥಿಗಳಿಂದ ತೀವ್ರ ಪ್ರತಿರೋಧ ಎದುರಿಸುತ್ತಿದೆ. ಈ ಪ್ರತಿರೋಧದಿಂದಾಗಿ ಈ ಚೌಹಾಣ್ ನೇಮಕಗೊಂಡು ಏಳು ತಿಂಗಳ ನಂತರ ಅಧಿಕಾರ ವಹಿಸಿಕೊಳ್ಳಬೇಕಾಗಿ ಬಂತು. ಸಂಸ್ಕೃತಿ, ಕಲೆ, ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರತಿಭಾವಂತರೆಲ್ಲ ಇರುವುದು ಉದಾರವಾದಿ ಪ್ರಗತಿಪರ ಪರಂಪರೆಯಲ್ಲಿ. ಚಡ್ಡಿ ಧರಿಸಿ ಲಾಠಿ ತಿರುಗಿಸುವವರಲ್ಲಿ, ಮೆದುಳನ್ನು ಕೋಮಾದಲ್ಲಿಟ್ಟು ದೇಹವನ್ನು ಮಾತ್ರ ಬೆಳೆಸಿಕೊಂಡಿರುವವರಲ್ಲಿ ಪ್ರತಿಭಾವಂತರು ಇರಲು ಸಾಧ್ಯವಿಲ್ಲ. ಅಂತಲೆ ಗಜೇಂದ್ರ ಚೌಹಾಣ್‌ರಂಥವರಿಗೆ ಅದೃಷ್ಟ ಒತ್ತರಿಸಿ ಬರುತ್ತದೆ. ಇಂಥ ಅವಿವೇಕದ ವಿರುದ್ಧ ಮಾತಾಡುವುದೇ ಈಗ ಅಪರಾಧವಾಗಿದೆ. ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಜನಜಾಗೃತಿ ಮೂಡಿಸಲು ಹೊರಟ ಮಹಾರಾಷ್ಟ್ರದ ಡಾ. ನರೇಂದ್ರ ದಾಭೋಳ್ಕರ್‌ರನ್ನು ಈ ಅವಿವೇಕಿಗಳು ಕೊಂದು ಹಾಕಿದರು. ಛತ್ರಪತಿ ಶಿವಾಜಿಯ ನೈಜ ಇತಿಹಾಸದ ಮೇಲೆ ಬೆಳಕು ಚೆಲ್ಲಿದ ಕೊಲ್ಲಾಪುರದ ಗೋವಿಂದ ಪನ್ಸಾರೆ ಅವರನ್ನು ಗುಂಡಿಕ್ಕಿ ಕೊಂದರು. ಧಾರವಾಡದ ಡಾ.ಎಂ.ಎಂ. ಕಲಬುರ್ಗಿ ಈ ಸೈತಾನರ ಗುಂಡಿಗೆ ಬಲಿಯಾದರ. 1975ರಲ್ಲಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಗಿಂತ ಕೆಟ್ಟ ಕಾಲದಲ್ಲಿ ನಾವಿದ್ದೇವೆ. ಆ ತುರ್ತು ಪರಿಸ್ಥಿತಿ ಕಾಲದಲ್ಲಿ ಯಾವ ಸಾಹಿತಿಯ ಕೊಲೆ ನಡೆದಿಲ್ಲ. ಆದರೆ ಈ ಗೋಡ್ಸೆವಾದಿಗಳ ಕಾಲದಲ್ಲಿ ದಾಭೋಳ್ಕರ್, ಪನ್ಸಾರೆ, ಕಲಬುರ್ಗಿ ಅವರಂಥ ಚಿಂತಕರು ಕೊಲ್ಲಲ್ಪಡುತ್ತಾರೆ. ಇದೀಗ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಶ್ರೀಪಾಲ ಸಬನಿಸ್ ಅವರಿಗೂ ಸನಾತನಿಗಳಿಂದ ಜೀವಬೆದರಿಕೆ ಬಂದಿದೆ. ಅಜ್ಞಾನ, ಅವಿವೇಕಗಳ ಈ ಅಟ್ಟಹಾಸದ ವಿರುದ್ಧ ಹೊಸ ಪೀಳಿಗೆಯನ್ನು ಜಾಗೃತಗೊಳಿಸಬೇಕಾಗಿದೆ. ಆದರೆ ವಿಷಾದದ ಸಂಗತಿ ಅಂದರೆ ಇಪ್ಪತ್ತೈದರೊಳಗಿನ ಯುವಕರನ್ನು ತಲುಪಲು ಪ್ರಗತಿಪರ ವಿಚಾರವಾದಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ನಾವು ಆಗಾಗ ನಡೆಸುವ ಸಮಾವೇಶಗಳಲ್ಲಿ ನಾವು ನಾವೇ ಪರಸ್ಪರರು ಭೇಟಿಯಾಗುತ್ತೇವೆಯೇ ಹೊರತು ಹೊಸಬರು ಬರುತ್ತಿಲ್ಲ. ಈ ನಿಟ್ಟಿನಲ್ಲಿ ವೈಚಾರಿಕ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಾಗಿದೆ. ಆರೆಸ್ಸೆಸ್ ಶಾಖೆಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಆಕರ್ಷಿಸಿ ಬ್ರೈನ್‌ವಾಶ್ ಮಾಡಲಾಗುತ್ತದೆ. ಔರಂಗಝೇಬನ ಕತೆ ಹೇಳಿ ಜನಾಂಗ ದ್ವೇಷದ ವಿಷಬೀಜ ಬಿತ್ತಲಾಗುತ್ತಿದೆ. ಆದರೆ ಇಂಥ ಎಳೆಯ ಮಕ್ಕಳನ್ನು ಆಕರ್ಷಿಸಿ ‘‘ಮನುಷ್ಯರೆಲ್ಲ ಒಂದು ಮನುಷ್ಯರೆಲ್ಲ ಬಂಧು’’ ಎಂದು ಅರಿವು ಮೂಡಿಸಲು ನಮ್ಮ ಪ್ರಗತಿಪರರ ಬಳಿ ಯಾವ ಕಾರ್ಯಕ್ರಮವೂ ಇಲ್ಲ. ಮುಂಚೆ ಎಡ ಪಕ್ಷಗಳು ಒಂದಿಷ್ಟು ಕೆಲಸ ಮಾಡುತ್ತಿದ್ದವು. ಅವೂ ಈಗ ಫ್ಯಾಕ್ಟರಿ ಹಾಗೂ ಲೇಬರ್ ಕಮಿಶನ್ನರ ಕಚೇರಿಗಳಿಗೆ ಸೀಮಿತವಾಗಿವೆ. ಈಗಲೂ ಕಾಲ ಮಿಂಚಿಲ್ಲ. ಹೊಸನೆತ್ತರುಕ್ಕುವ ತರುಣರತ್ತ ಶಾಲಾ ಕಾಲೇಜು ಕ್ಯಾಂಪಸ್‌ಗಳತ್ತ ನಾವು ಹೋಗಬೇಕಾಗಿದೆ. ಅಲ್ಲಿ ನುಸುಳಿರುವ ಕೋಮುವಾದಿ, ಜಾತಿವಾದಿ ವಿಷಜಂತುಗಳನ್ನು ತೊಲಗಿಸಿ ವಿಶ್ವ ಮಾನವತೆಯ ಬೆಳಕಿತ್ತ ಬುದ್ಧ, ಬಸವ, ಅಂಬೇಡ್ಕರ್ ತೋರಿದ ಬೆಳಕಿನ ದಾರಿಯತ್ತ ಈ ಹೊಸ ಪೀಳಿಗೆಯನ್ನು ನಾವು ಕೊಂಡೊಯ್ಯಬೇಕಾಗಿದೆ.

share
ಸನತ್ ಕುಮಾರ‍್ ಬೆಳಗಲಿ
ಸನತ್ ಕುಮಾರ‍್ ಬೆಳಗಲಿ
Next Story
X