ಮೋದಿಗೆ ಉತ್ತಮ ವೈಜ್ಞಾನಿಕ ಸಲಹೆಗಾರರು ಅಗತ್ಯ: ರಾವ್

ಬೆಂಗಳೂರು, ಜ.10: ಪ್ರಧಾನಿ ನರೇಂದ್ರ ಮೋದಿಯವರಿಗೆ ತನ್ನ ದೂರದೃಷ್ಟಿಯನ್ನು ವಾಸ್ತವ ವಾಗಿಸಲು ಹಾಗೂ ಅಭಿಯಾನ ಮಾದರಿಯಲ್ಲಿ ಯೋಜನೆಗಳನ್ನು ಆರಂಭಿಸಲು ಸರಿಯಾದ ವೈಜ್ಞಾನಿಕ ಸಲಹೆ ಅಗತ್ಯವಿದೆಯೆಂದು ಭಾರತ ರತ್ನ ವಿಜ್ಞಾನಿ ಸಿಎನ್‌ಆರ್ ರಾವ್ ಅಭಿಪ್ರಾಯಿಸಿದ್ದಾರೆ.
ಯಾವನೇ ಒಬ್ಬ ವ್ಯಕ್ತಿ ಅಥವಾ ಒಂದು ಸಚಿವಾಲಯದಿಂದ ವಿಜ್ಞಾನವಾಗಲಿ, ಸಮಾಜ ದ್ದಾಗಲಿ ಭಾರೀ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗದು. ವಿಜ್ಞಾನವನ್ನು ಉಪಯೋಗಿಸಿ ಶೇಷ ವಿಶ್ವವದೊಂದಿಗೆ ಸ್ಪರ್ಧಿಸುತ್ತಲೇ ಬಡತನದ ಭಾರೀ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ಈ ಎಲ್ಲ ವಿಷಯಗಳನ್ನು ಭಾರತ ಮಾಡಬೇಕಾದರೆ ಪ್ರಧಾನಿ ಮೋದಿ, ಆದ್ಯತೆಗಳೇನು ನಾವು ಮಾಡಬೇಕಾದ ಕೆಲಸದಲ್ಲಿ ಮುಂದುವರಿಯುವುದು ಹೇಗೆ ಎಂಬುದನ್ನು ತಿಳಿಯುವ ಅಗತ್ಯವಿದೆ. ಅವರು ಸರಿಯಾದ ಸಲಹೆ ಪಡೆಯುತ್ತಾರೆ ಹಾಗೂ ಅವರಿಗೆ ಸಲಹೆ ನೀಡಲು ಒಂದು ರೀತಿಯ ಜನರ ಗುಂಪನ್ನು ಪಡೆಯುತ್ತಾರೆಂದು ನಾನು ಆಶಿಸುತ್ತೇನೆ. ಅವರದನ್ನು ಮಾಡಲೆಂದು ನಾನು ಆಶಿಸುತ್ತೇನೆ ಹಾಗೂ ಪ್ರಾರ್ಥಿಸುತ್ತೇನೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಮೂಲಭೂತ ವಿಜ್ಞಾನದ ಕುರಿತಂತೆ ಸರಕಾರದ ನಿರ್ಲಕ್ಷವನ್ನು ಎತ್ತಿ ಹಿಡಿದಿರುವ ಅವರು, ನನ್ನ ಸ್ವಂತ ಬದುಕಿನಲ್ಲಿ ನಾನು ಪಡೆದಿರುವ ಉತ್ತಮ ನಿಧಿಗಳೆಲ್ಲ ಬೇರೆಡೆಗಳಿಂದಲೇ ಹೊರತು ಭಾರತದಿಂದಲ್ಲ. ಭಾರತ ಅದನ್ನು ಮಾಡದಿರುವುದು ತೀವ್ರ ಅನ್ಯಾಯ. ಕೆಲವು ವಲಯಗಳಲ್ಲಿ ಮೋದಿ ಅಭಿಯಾನ ಮಾದರಿಯನ್ನು ಅಳವಡಿಸಬೇಕು.
ಬಹಳ ಹಿಂದೆ ನಾವು ಉತ್ತಮ ಗುಣಮಟ್ಟದ ಬೀಜಗಳು, ಸುರಕ್ಷಿತ ಕುಡಿಯುವ ನೀರು, ಅನಕ್ಷರತೆ ನಿವಾರಣೆ ಅಭಿಯಾನ, ಮಲೇರಿಯಾ ನಿರ್ಮೂಲನಗಳಂತಹುದಕ್ಕೆ ತಾಂತ್ರಿಕ ಪರಿಹಾರಕ್ಕಾಗಿ ಅಭಿಯಾನ ಮಾದರಿಯನ್ನು ಅನುಸರಿದ್ದೆವು. ಮೋದಿ ಆರಂಭಿಸಬೇಕಾಗಿರುವುದು ಅಭಿಯಾನ ಮಾದರಿಯ ಯೋಜನೆಗಳನ್ನು ದೇಶದ ಬಡಜನರು ಹಾಗೂ ಒಟ್ಟಾರೆಯಾಗಿ ಸಮಾ ಜಕ್ಕೆ ಸಹಾಯಕವಾಗುವ 5-6 ಪ್ರಮುಖ ಅಭಿಯಾನಗಳು ಭಾರತಕ್ಕೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.







