ವಿಟ್ಲಪಡ್ನೂರು: ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

ಬಂಟ್ವಾಳ, ಜ.10: ಅಭಿವೃದ್ಧಿ ಕಾಮಗಾರಿಗಳ ಸಮರ್ಪಕ ಅನು ಷ್ಠಾನಕ್ಕೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಕೆಲಸ ವೇಗದ ಜೊತೆಗೆ ಗುಣಮಟ್ಟವು ಉತ್ತಮ ವಾಗಿರಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಿಸಿದರು.
ಅವರು ರವಿವಾರ ವಿಟ್ಲಪಡ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾ ರಿಗಳಿಗೆ ಶಿಲಾನ್ಯಾಸ ಹಾಗೂ ಬಸ್ ತಂಗುದಾಣಗಳನ್ನು ಉದ್ಘಾಟಿಸಿ ಮಾತ ನಾಡುತ್ತಿದ್ದರು. ಮಾಣಿ-ಕೋಡಪದವು ರಸ್ತೆ ಡಾಮರು ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ಮೀಸಲಾದ ಸೆಂಟ್ರಲ್ ರೋಡ್ ಫಂಡ್ ಯೋಜನೆಯಡಿ ಮಾಡ ಲಾಗಿದೆ. ಇನ್ನು ಸ್ವಲ್ಪ ಭಾಗ ಉಳಿದು ಕೊಂಡಿದ್ದು, ಅದಕ್ಕೂ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಕರ್ನಾಟಕ ಸರಕಾರ ಅಪೆಂಡಿಕ್ಸ್-ಇ ಬಜೆಟ್ ಅನುದಾನದಡಿ 4 ಕೋ.ರೂ. ವೆಚ್ಚದ ಕೊಡುಂಗಾಯಿ ಸೇತುವೆ, 1 ಕೋ.ರೂ. ವೆಚ್ಚದ ಕಡಂಬು ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ತಾಪಂನ ತಲಾ 1 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾದ ಕೊಡಂಗಾಯಿ ಹಾಗೂ ಪರ್ತಿಪ್ಪಾಡಿ ಬಸ್ ನಿಲ್ದಾಣಗಳನ್ನು ಸಚಿವ ರೈ ಉದ್ಘಾಟಿಸಿದರು. ಇದೇ ವೇಳೆ ಜಿಪಂ ಹಾಗೂ ತಾಪಂ ಸದಸ್ಯರನ್ನು ಸಾರ್ವ ಜನಿಕರ ಪರವಾಗಿ ಸನ್ಮಾನಿಸಲಾಯಿತು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್, ತಾಪಂ ಸದಸ್ಯ ಮಾಧವ ಮಾವೆ, ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ವಿಟ್ಲಪಡ್ನೂರು ಗ್ರಾಪಂ ಉಪಾಧ್ಯಕ್ಷೆ ಸುಧಾ ಎಸ್. ಶೆಟ್ಟಿ, ಸದಸ್ಯರಾದ ನಾಗೇಶ್ ಶೆಟ್ಟಿ, ಸಿದ್ದೀಕ್ ಸರವು, ಅಬ್ದುರ್ರಹ್ಮಾನ್ ಕಡಂಬು, ಭಾರತಿ ಎಸ್. ಶೆಟ್ಟಿ, ಪ್ರಭಾರ ಪಿಡಿಒ ಸುಜಯಾ ಉಪಸ್ಥಿತರಿದ್ದರು. ವಿಟ್ಲ ಪಡ್ನೂರು ಗ್ರಾಪಂ ಅಧ್ಯಕ್ಷ ರವೀಶ್ ಶೆಟ್ಟಿ ಸ್ವಾಗತಿಸಿದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಉಮೇಶ್ ಭಟ್ ಪ್ರಸ್ತಾವನೆಗೈದರು. ವಿಟ್ಲ ಪಡ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ಲ ಕುಕ್ಕಿಲ ವಂದಿಸಿದರು. ಸಂದೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





