ಜನಜಾಗೃತಿ ಮೂಡಿಸುವ ಸುರಕ್ಷಾ ರಥಕ್ಕೆ ಚಾಲನೆ

ಉಡುಪಿ, ಜ.10: ಉಡುಪಿ ಪರ್ಯಾಯ ಮಹೋತ್ಸವದ ಪ್ರಯುಕ್ತ ಜನ ಜಾಗೃತಿ ಮೂಡಿಸುವ ಸುರಕ್ಷಾ ರಥಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಇಂದು ಉಡುಪಿ ಅಜ್ಜರಕಾಡಿನ ಪುರಭವನದ ಎದುರು ಚಾಲನೆ ನೀಡಿದರು.
‘ಹಿಂದಿನ ಪರ್ಯಾಯಕ್ಕಿಂತ ಈ ಬಾರಿಯ ಪರ್ಯಾಯಕ್ಕೆ ಐದು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿ ಸುವುದರಿಂದ ಈ ಸಮಯದಲ್ಲಿ ಕಳ್ಳರ ಸಂಖ್ಯೆ ಕೂಡ ಹೆಚ್ಚು ಇರುತ್ತದೆ. ಚಲಾಕಿ ಕಳ್ಳರು ಕೂಡ ಬೇರೆ ಬೇರೆ ತಂತ್ರಗಳನ್ನು ಬಳಸಿ ಕಳ್ಳತನಕ್ಕೆ ಸಂಚು ನಡೆಸುವುದರಿಂದ ಜನತೆ ಬಹಳ ಎಚ್ಚರಿಕೆಯಿಂದ ಇರಬೇಕು’ ಎಂದು ಎಸ್ಪಿ ಅಣ್ಣಾಮಲೈ ತಿಳಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಪುರುಷೋತ್ತಮ ಶೆಟ್ಟಿ, ಲಯನ್ಸ್ ಪರ್ಕಳದ ಅರುಣ್ ಕುಮಾರ್, ಉಡುಪಿ ಲಯನ್ಸ್ ಕ್ಲಬ್‌ನ ಸುರೇಶ್ ಪ್ರಭು, ಎಸ್‌ಕೆಪಿಎಯ ವಾಸುದೇವ ರಾವ್, ಉಡುಪಿ ವೃತ್ತ ನಿರೀಕ್ಷಕ ಶ್ರೀಕಾಂತ್, ನಗರ ಠಾಣಾಧಿಕಾರಿ ಗಿರೀಶ್, ಡಾ.ರೋಶನ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತ ರಿದ್ದರು.
ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಪರ್ಯಾಯೋತ್ಸವ ಸ್ವಾಗತ ಸಮಿತಿ, ಉಜ್ವಲ್ ಡೆವಲ ಪರ್ಸ್, ಪರ್ಕಳ ಲಯನ್ಸ್ ಕ್ಲಬ್‌ಗಳ ಸಹಯೋಗದೊಂದಿಗೆ ಹಮ್ಮಿಕೊಂ ಡಿರುವ ಈ ರಥವು ಎಂಟು ದಿನಗಳ ಕಾಲ ಉಡುಪಿ ನಗರ, ಪರ್ಕಳ, ಸಂತೆಕಟ್ಟೆ ಪರಿಸರದಲ್ಲಿ ಸಂಚರಿಸಿ ರಸ್ತೆ ಸುರಕ್ಷತೆ, ಸಂಚಾರ ನಿಯಮ, ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದೆ.
ಪರ್ಯಾಯಕ್ಕೆ ಅಡ್ವಾಣಿ: ಶೂನ್ಯ ಸಂಚಾರ
ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಸೇರಿದಂತೆ ಹಲವು ಗಣ್ಯರು ಈ ಬಾರಿಯ ಪೇಜಾವರ ಪರ್ಯಾಯಕ್ಕೆ ಆಗಮಿಸುವುದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಶೂನ್ಯ ಸಂಚಾರ ವ್ಯವಸ್ಥೆ ಯನ್ನು ಕಲ್ಪಿಸುವುದು ಅನಿವಾರ್ಯ ವಾಗಿದೆ. ಆದುದರಿಂದ ಉಡುಪಿಯ ಜನತೆ ಜ.17 ಮತ್ತು 18ರಂದು ಈ ವ್ಯವಸ್ಥೆಗೆ ಮಾನಸಿಕವಾಗಿ ಸಜ್ಜಾ ಗಬೇಕು. ಅದೇ ರೀತಿ ಯಾವುದೇ ಕಾರ್ಯಕ್ರಮಗಳನ್ನು ನಡೆಸದೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಎಸ್ಪಿ ಅಣ್ಣಾಮಲೈ ತಿಳಿಸಿದರು.







