‘2015ರಲ್ಲಿ ಎವರೆಸ್ಟ್ ಆರೋಹಣದಲ್ಲಿ ಶೂನ್ಯ ದಾಖಲೆ’
ಲಂಡನ್,ಜ.10: ಜಗತ್ತಿನ ಅತ್ಯಂತ ಎತ್ತರದ ವೌಂಟ್ ಎವರೆಸ್ಟ್ ಶಿಖರದ ನೆತ್ತಿಯನ್ನೇರಲು ಕೆಲವು ದಶಕಗಳ ಬಳಿಕ ಇದೇ ಮೊದಲ ಬಾರಿಗೆ 2015ರಲ್ಲಿ ಯಾವುದೇ ಪರ್ವತಾರೋಹಿಯಿಂದ ಸಾಧ್ಯವಾಗಿಲ್ಲ ಎಂದು ‘ಟೆಲಿಗ್ರಾಫ್’ ವರದಿ ಮಾಡಿದೆ.
1974ರ ಬಳಿಕ ಯಾವುದೇ ಪರ್ವತಾರೋಹಿಯು ವೌಂಟ್ ಎವರೆಸ್ಟ್ ಏರದಿರುವುದು ಇದೇ ಮೊದಲ ಬಾರಿಯಾಗಿದೆ.
ಕಳೆದ ವರ್ಷ ಎಪ್ರಿಲ್‌ನಲ್ಲಿ ನೇಪಾಳದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪವು 24 ಮಂದಿ ಪರ್ವತಾರೋಹಿಗಳನ್ನು ಬಲಿತೆಗೆದುಕೊಂಡಿದ್ದು, ಒಂದೇ ದಿನದಲ್ಲಿ ಗರಿಷ್ಠ ಪರ್ವತಾರೋಹಿಗಳನ್ನು ಬಲಿತೆಗೆದುಕೊಂಡ ಘಟನೆಯಾಗಿದೆ.
2015ರಲ್ಲಿ ಯಾವುದೇ ಪರ್ವತಾರೋಹಿಗೆ ವೌಂಟ್ ಎವರೆಸ್ಟ್ ಏರಲು ಸಾಧ್ಯವಾಗದಿರಲು ನೇಪಾಳ ಭೂಕಂಪದ ಹಿನ್ನೆಲೆಯಲ್ಲಿ ವೌಂಟ್ ಎವರೆಸ್ಟ್ ಮಾರ್ಗವನ್ನು ಮುಚ್ಚಿರುವುದೂ ಭಾಗಶಃ ಕಾರಣವಾಗಿದೆ ಎನ್ನಲಾಗಿದೆ.
Next Story