ನಾಳೆ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ
ಸುಳ್ಯ, ಜ.10: ಸ್ವಾಮಿ ವಿವೇಕಾನಂದ ಜನ್ಮ ದಿನೋತ್ಸವ ಕಾರ್ಯಕ್ರಮ ಸುಳ್ಯದ ವಿವೇಕಾನಂದ ವೃತ್ತದ ಬಳಿ ಜ12ರಂದು ಬೆಳಗ್ಗೆ9ಕ್ಕೆ ನಡೆಯಲಿದ್ದು, ಶಾಸಕ ಎಸ್.ಅಂಗಾರ ಮತ್ತಿತರರು ಭಾಗವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ರಕ್ತದಾನ ಮಾಡುವವರ ರಕ್ತ ವರ್ಗೀಕರಣ ಮಾಡಲಾಗುತ್ತದೆ. ಇವರ ದೂರವಾಣಿ ಸಂಖ್ಯೆಗಳನ್ನು ದಾಖಲಿಸಿಟ್ಟು, ರಕ್ತ ನಿಧಿಗಳಲ್ಲಿ ತುರ್ತು ರಕ್ತ ಬೇಕಾದಾಗ ಸಿಗುವ ವ್ಯವಸ್ಥೆ ಮಾಡಲಾಗುವುದು ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
Next Story





