ನಾಳೆ ರಾಷ್ಟ್ರೀಯ ಯುವ ದಿನಾಚರಣೆ
ಮೂಡುಬಿದಿರೆ, ಜ.10: ಸ್ವಾಮಿ ವಿವೇಕಾನಂದರ 153ನೆ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಯುವ ಸಮಾವೇಶವು ಜ.12ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ವಿವೇಕಾನಂದ ಜನ್ಮ ದಿನೋತ್ಸವ ಮೂಡುಬಿದಿರೆ ಸಮಿತಿ ಸಂಚಾಲಕ ದೇವಿ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ‘ಸ್ವಚ್ಛ ವ್ಯಸನ ಮುಕ್ತ ಮತ್ತು ಸಾಮರಸ್ಯಪೂರ್ಣ ಮೂಡುಬಿದಿರೆಗಾಗಿ’ ಎಂಬ ಧ್ಯೇಯವಾಕ್ಯದೊಂದಿಗೆ, ವಿದ್ಯಾರ್ಥಿಗಳಿಗೆ ವಿವೇಕಾನಂದರ ತತ್ವಗಳ ಜೊತೆಗೆ ಚೈತನ್ಯದ ಅರಿವು ಮೂಡಿಸಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು. ಬಿಜೆಪಿ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಧಿರೇಂದ್ರ ಜೈನ್, ಸಂಕೀರ್ತ್, ಸಮಿತಿ ಸದಸ್ಯ ಗುರುಬಾಗೇವಾಡಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Next Story





