ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಸಲ್ಲದು: ಸುಪ್ರಿಮ್‌ಕೋರ್ಟ್

ಹೊಸದಿಲ್ಲಿ, ಜ.11: ದೇವಸ್ಥಾನಗಳಿಗೆ ಮಹಿಳೆಯರ ಪ್ರವೇಶ ನಿರಾಕರಣೆ ಅಸಂವಿಧಾನಿಕವಾಗಿದೆ. ಈ ಕಾರಣದಿಂದಾಗಿ ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಸರಿಯಲ್ಲ ಎಂದು ಸುಪ್ರಿಮ್‌ಕೋರ್ಟ್ ಇಂದು ಅಭಿಪ್ರಾಯಪಟ್ಟಿದೆ.
ಮಹಿಳೆಯರು ಸಂವಿಧಾನಬದ್ಧ ಹಕ್ಕನ್ನು ಹೊಂದಿರುವ ಹಿನ್ನೆಲೆಯಲ್ಲಿ ಅವರನ್ನು ದೇವಸ್ಥಾನದ ಒಳಪ್ರವೇಶಿಸದಂತೆ ತಡೆಯುವುದು ಸರಿಯಲ್ಲ ಎಂದು ಹೇಳಿದೆ.
ತಮಿಳುನಾಡಿನಲ್ಲಿ ದೇವಾಲಯ ಪ್ರವೇಶಕ್ಕೆ ಹೈಕೋರ್ಟ್ ನೀಡಿದ್ದ ವಸ್ತ್ರ ಸಂಹಿತೆ ಆದೇಶಕ್ಕೆ ಸುಪ್ರಿಮ್ ಕೋರ್ಟ್ ತಡೆ ನೀಡಿದೆ.
Next Story





