Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹಿಂದುಯಿಸಂ ಕುರಿತಂತೆ ಇಣುಕುನೋಟ

ಹಿಂದುಯಿಸಂ ಕುರಿತಂತೆ ಇಣುಕುನೋಟ

ಮುಕುಲ್ ದುಬೆಮುಕುಲ್ ದುಬೆ11 Jan 2016 9:40 PM IST
share
ಹಿಂದುಯಿಸಂ ಕುರಿತಂತೆ ಇಣುಕುನೋಟ

 ಹಿಂದೂ ಎಂಬ ಪದವನ್ನು ಹಿಂದೂ ಧರ್ಮ ಅಥವಾ ಹಿಂದುತ್ವವನ್ನು ಪಾಲಿಸುವವರಿಗೆ ಇಂದು ಬಳಸಲಾಗುತ್ತದೆ. ಆದರೆ ಅದು ವಾಸ್ತವವಾಗಿ ಹಾಗಲ್ಲ.

ಇಂಡೋ ಆರ್ಯನ್ ಸಂಸ್ಕೃತಿ ನಂಬಿಕೊಂಡು ಬಂದಂತೆ, ಸಿಂಧೂ ಎಂದರೆ, ದೊಡ್ಡ ಜಲ ರಾಶಿ ಎಂಬ ಅರ್ಥ. ಇದನ್ನು ನದಿ ಹಾಗೂ ಸಮುದ್ರಗಳಿಗೆ ಬಳಸಲಾಗುತ್ತದೆ. ಈ ಶಬ್ದ ಕ್ರಮೇಣ ಪ್ರದೇಶದ ಅತಿದೊಡ್ಡ ನದಿಯಾದ ನದಿಗೆ ಅನ್ವರ್ಥವಾಯಿತು. ಇಂದು ಇದನ್ನು ಇಂಡಸ್ ಎಂದು ಕರೆಯುತ್ತೇವೆ. ಹಿಂದ್ ಮತ್ತು ಅಲ್ ಹಿಂದ್ ಪದವನ್ನು, ಈ ನದಿ ವ್ಯಾಪಿಸಿರುವ ಭಾರತ ಉಪಖಂಡ ಪ್ರದೇಶದಲ್ಲಿ ವಾಸಿಸುವ ಜನತೆಯನ್ನು ಕರೆಯಲು ಆರಂಭಿಸಲಾಯಿತು. ಅರಬ್ ಹಾಗೂ ಪರ್ಶಿಯನ್ನರ ಕಾಲದಲ್ಲಿ ಇದು ಪ್ರಚಲಿತಕ್ಕೆ ಬಂತು. ಅಂದರೆ ಸುಮಾರು ಆರನೆ ಶತಮಾನದಲ್ಲಿ. ಈ ಭೌಗೋಳಿಕ ಹೆಸರನ್ನು ನಿರ್ದಿಷ್ಟ ಜನಾಂಗ ಹಾಗೂ ಸಂಸ್ಕೃತಿಗೂ ಅನ್ವಯಿಸಲಾಗಿದೆ. ತೀರಾ ಇತ್ತೀಚಿನವರೆಗೂ ಧರ್ಮಕ್ಕೂ, ಹಿಂದೂ ಎಂಬ ಪದಕ್ಕೂ ಯಾವ ಸಂಬಂಧವೂ ಇರಲಿಲ್ಲ.

ಹಿಂದೂ ಧರ್ಮದ ಪ್ರತಿಪಾದಕರು, ಅದರಲ್ಲೂ ಮುಖ್ಯವಾಗಿ ಹಿಂದುತ್ವ ಸಿದ್ಧಾಂತದ ಅನುಯಾಯಿಗಳು, ಹಿಂದೂ ಧರ್ಮ ವಿಶ್ವದ ಅತ್ಯಂತ ಸನಾತನ ಧರ್ಮ ಎಂದು ಕರೆದುಕೊಳ್ಳುತ್ತಾರೆ. ಇದೀಗ ಹಲವು ಧಾರ್ಮಿಕ ಪಂಗಡಗಳು ಗುಂಪು ಸೇರಿ, ಹಿಂದುತ್ವ ಅತ್ಯಂತ ಪ್ರಾಚೀನ ಧರ್ಮ ಎನ್ನುವುದನ್ನು ಅಂಗೀಕರಿಸಿವೆ. ಈ ಧಾರ್ಮಿಕ ವಾಹಿನಿಯನ್ನು ಅನುಸರಿಸುವವರಿಗೆ ಅಥವಾ ಆ ಧರ್ಮೀಯರಿಗೆ ಹಿಂದೂ ಎಂಬ ಪದವು ಇತ್ತೀಚಿನವರೆಗೂ ಅನ್ವಯಿಸುತ್ತಿರಲಿಲ್ಲ.

ಡಿ.ಎನ್.ಝಾ ತಮ್ಮ 'ಲುಕಿಂಗ್ ಫಾರ್ ಎ ಹಿಂದೂ ಐಡೆಂಟಿಟಿ' ಎಂಬ ಪ್ರಬಂಧದಲ್ಲಿ, ''ಯಾವ ಭಾರತೀಯ ಕೂಡಾ ಹದಿನಾಲ್ಕನೆ ಶತಮಾನದ ಪೂರ್ವದಲ್ಲಿ ಹಿಂದೂ ಎಂದು ಬಣ್ಣಿಸಿಕೊಳ್ಳುತ್ತಿರಲಿಲ್ಲ. ಹಿಂದುತ್ವ ಎನ್ನುವುದು ಸಾಮ್ರಾಜ್ಯಶಾಹಿ ಆಡಳಿತಾವಧಿಯ ಸೃಷ್ಟಿ. ಹಾಗೂ ಇದು ಯಾವ ದೃಷ್ಟಿಯಿಂದಲೂ ಪ್ರಾಚೀನತೆಯ ಪ್ರತಿಪಾದನೆ ಮಾಡಿಕೊಳ್ಳುವಂತಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ಹದಿನೆಂಟನೆ ಶತಮಾನದಲ್ಲಿ, ಯೂರೋಪಿಯನ್ ವ್ಯಾಪಾರಿಗಳು ಹಾಗೂ ಸಾಮ್ರಾಜ್ಯಶಾಹಿಗಳು, ಭಾರತೀಯ ಧರ್ಮದ ಅನುಯಾಯಿಗಳನ್ನು ಸಂಘಟಿತವಾಗಿ ಹಿಂದೂಗಳು ಎಂದು ಕರೆದರು.

''ಬ್ರಿಟಿಷರು ಹಿಂದೂ ಎಂಬ ಪದವನ್ನು ಭಾರತದಿಂದ ಎರವಲು ಪಡೆದುಕೊಂಡು ಇದಕ್ಕೆ ಹೊಸ ಅರ್ಥ ಹಾಗೂ ಮಹತ್ವವನ್ನು ಕಲ್ಪಿಸಿದರು. ಅದನ್ನು ಮತ್ತೆ ಹಿಂದುತ್ವ ಪರಿಶುದ್ಧಗೊಳಿಸಿ, ಮರು ಪರಿಕಲ್ಪನೆಯೊಂದಿಗೆ ಭಾರತಕ್ಕೆ ಮರು ಆಮದು ಮಾಡಿಕೊಂಡರು'' ಎಂದು ಝಾ ವಿವರಿಸುತ್ತಾರೆ.

ಇದಕ್ಕಿಂತ ತೀರಾ ಮೊದಲು,ಅಬ್ದ್‌ಅಲ್‌ಮಲಿಕ್ ಇಸ್ಲಾಮಿ ತಮ್ಮ ಪರ್ಶಿಯನ್ ಭಾಷೆಯ 'ಫುತುಹುಸ್ಸಲಾತೀನ್' ಎಂಬ ಕೃತಿಯಲ್ಲಿ ದಖ್ಖನ್ ಪ್ರಾಂತದಲ್ಲಿ 1350ರ ಅವಧಿಯಲ್ಲಿ ಭಾರತೀಯರನ್ನು ಜನಾಂಗೀಯ ಹಾಗೂ ಭೌಗೋಳಿಕ ಅರ್ಥದಲ್ಲಿ ಹಿಂದಿ ಎಂಬ ಪದದಿಂದ ಕರೆದಿದ್ದಾರೆ. ಹಾಗೂ ಹಿಂದೂ ಧರ್ಮದ ಅನುಯಾಯಿಗಳು ಎಂಬ ಅರ್ಥದಲ್ಲಿ ಹಿಂದೂ ಎಂಬ ಪದ ಬಳಸಿದ್ದಾರೆ. ಆದರೆ ಈ ಬಳಕೆ ಅಪರೂಪವಾಗಿಯೇ ಉಳಿದಿದೆ.

ಸಹಿಷ್ಣುತೆಯ ಕಲ್ಪನೆ

ಪ್ರತಿ ಧರ್ಮವೂ ಇನ್ನೊಂದು ಧರ್ಮಕ್ಕೆ ಶತ್ರುಸ್ವರೂಪದ್ದು. ಎಲ್ಲರಿಗೂ ತಿಳಿದಿರುವಂತೆ ಶೈವ ಹಾಗೂ ವೈಷ್ಣವ ಪಂಥದ ನಡುವಿನ ಈ ಬಗೆಯ ಭಿನ್ನತೆಯಿಂದಾಗಿಯೇ ಇವುಗಳು ಉಪಪಂಗಡವಾಗಿರದೇ ಪ್ರತ್ಯೇಕ ಧರ್ಮಗಳಾ ಗಿವೆ. ಅದು ಕೂಡಾ ಈ ಬಗೆಯ ಪ್ರತ್ಯೇಕತೆ ಅರ್ಥಹೀನ.ಎರಡೂ ಪ್ರಬಲ ಹಾಗೂ ಪ್ರತ್ಯೇಕ ಪಂಥಗಳು, ಈಗ ಹಿಂದುತ್ವದ ಕೊಡೆಯಲ್ಲಿ ಸೇರಿಕೊಂಡಿ ರುವ ಇತರ ಧಾರ್ಮಿಕ ಪಂಥಗಳನ್ನು ದ್ವೇಷಿಸುತ್ತಲೇ ಬಂದಿವೆ. ಉದಾಹರಣೆಗೆ ಒಂದೆಡೆ ಬ್ರಾಹ್ಮಣ್ಯ ಹಾಗೂ ಇನ್ನೊಂದೆಡೆ ಬೌದ್ಧಧರ್ಮ ಹಾಗೂ ಜೈನಧರ್ಮದ ದ್ವೇಷವನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಈ ಹಿನ್ನೆಲೆಯಲ್ಲಿ ಹಿಂದುತ್ವವನ್ನು ಅಥವಾ ಇತರ ಯಾವುದೇ ಧರ್ಮವನ್ನು ಸಹಿಷ್ಣುತೆ ಅರ್ಥದಲ್ಲಿ ಬಳಸುವುದು ಅಸಂಬದ್ಧ. ಇಡೀ ವಿಶ್ವದಲ್ಲಿ ಇಂದು ಕೇಳಿ ಬರುತ್ತಿರುವ ಘೋಷಣೆಯೆಂದರೆ, ''ನಾನು ಸಾವಿನ ತನಕವೂ ನನ್ನ ಧರ್ಮವನ್ನು ಸಂರಕ್ಷಿಸಿಕೊಳ್ಳುತ್ತೇನೆ'' ಎನ್ನುವುದು. ಅಂದರೆ ಸಂರಕ್ಷಕ ಯುದ್ಧದಲ್ಲಿ ಸಾಯದಿದ್ದರೆ, ದಾಳಿ ಮಾಡಿದವನಾದರೂ ಸಾಯುತ್ತಾನೆ ಎಂಬ ಅರ್ಥ. ಸಾವಿನವರೆಗೂ ಹೋರಾಡದಿದ್ದರೆ ಮತ್ತು ಅವರು ಧಾರ್ಮಿಕವಾಗಿರದಿದ್ದರೆ ಭಾರತದ ವಿವಿಧ ಆಖಾಡಾಗಳು ಏನು ಮಾಡುತ್ತವೆ?

ಹಿಂದೋಸ್ತಾನ್ ಅಥವಾ ಹಿಂದೂಸ್ತಾನ ಎಂಬ ಭೌಗೋಳಿಕ ಹೆಸರು ಗೊಂದಲಕಾರಿಯಾಗಿದ್ದು, ಇದು ಮೂಲತಃ ಪರ್ಶಿಯನ್ ಭಾಷೆಯ ಶಬ್ದ. ಇದು ಹೊಸ ರೂಪ ಪಡೆದು ಹಿಂದೂ + ಸ್ಥಾನ ಎಂದಾಗಿದೆ ಎಂದರೆ ಜನ ಯಾವ ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದು ತಿಳಿಯುತ್ತದೆ. ಏನಿದ್ದರೂ ಅದು ಅಜ್ಞಾನ ಅಥವಾ ವಿವೇಚನಾ ರಹಿತ. ವಾಸ್ತವವೆಂದರೆ, ಹಿಂದೂ ಧರ್ಮವನ್ನು ಬಣ್ಣಿಸುವ ಯೋಚನೆ ಮಾಡುವ ಮೊದಲೇ ಹಿಂದೂಸ್ತಾನ್ ಎಂಬ ಬಳಕೆ ಶತಮಾನಗಳ ಹಿಂದೆ ಬಳಕೆಯಲ್ಲಿತ್ತು.

share
ಮುಕುಲ್ ದುಬೆ
ಮುಕುಲ್ ದುಬೆ
Next Story
X