ಚಿಲ್ಲರೆ ನೀಡುವ ವಿಚಾರಕ್ಕೆ ಸಂಬಂಧಿಸಿ ಸರ್ಕಾರಿ ಬಸ್ ಕಂಡಕ್ಕರ್ ಮತ್ತು ಕುಡುಕ ಪ್ರಯಾಣಿಕನ ಮಧ್ಯೆ ಮಾರಾಮಾರಿ
ಮಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಕುಡುಕನೋರ್ವ ಪ್ರಯಾಣಿಸ್ತಾ ಇದ್ದು, ಈ ವೇಳೆ ಚಿಲ್ಲರೆ ನೀಡೋ ವಿಚಾರಕ್ಕೆ ಸಂಬಂಧಿಸಿ ಕಂಡಕ್ಟರ್ ಜೊತೆ ಜಗಳ ನಡೆದಿದೆ. ಕೊನೆಗೆ ಕನ್ಯಾಡಿ ಬಳಿ ಬಸ್ಸಿನಿಂದ ಆತನನ್ನು ಎಳೆದು ಹಾಕಿದ ಕಂಡಕ್ಟರ್ ಮರಳಿನ ರಾಶಿಗೆ ತಳ್ಳಿ ಯದ್ವಾ ತದ್ವಾ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ವೇಳೆ ಕುಡುಕನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಪ್ರಯಾಣಿಕರು ಬೇಡ ಅಂದ್ರೂ ಕಂಡಕ್ಟರ್ ಹಲ್ಲೆ ನಡೆಸ್ತಾ ಇದ್ದ ದೃಶ್ಯವನ್ನ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.
Next Story





