ರೈಫಲ್‌ನಿಂದ ಆಕಸ್ಮಿಕ ಗುಂಡು ಹಾರಾಟ;ಹೆಡ್ ಕಾನ್‌ಸ್ಟೇಬಲ್ ಮೃತ್ಯು
ಶ್ರೀನಗರ, ಜ.11: ಜಮ್ಮು ಮತ್ತು ಕಾಶ್ಮೀರದಲ್ಲಿ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ನಿಧನದ ನಾಲ್ಕನೆ ದಿನದ ಪ್ರಾರ್ಥನಾ ಸಭೆಗೆ ಬಂದೋಬಸ್ತ್‌ಗೆ ನಿಯೋಜಿತರಾಗಿದ್ದ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ತನ್ನ ಸರ್ವಿಸ್ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮವಾಗಿ ಸಾವಿಗೀಡಾಗಿದ್ದಾರೆ.
ಹೆಡ್‌ಕಾನ್‌ಸ್ಟೇಬಲ್ ಓಮ್ ಪ್ರಕಾಶ್ ಬಾಟ್ಮಾಲೊದ ಡಿಪಿಎಲ್‌ನಲ್ಲಿ ಕರ್ತವ್ಯ ನಿರತರಾಗಿದ್ದಾಗ ಅವರ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿತು. ಗಂಭೀರ ಗಾಯಗೊಂಡ ಅವರನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಉದಂಪುರದ ಶೇರ್-ಇ- ಕಾಶ್ಮೀರ ಪೊಲೀಸ್ ಅಕಾಡಮಿಗೆ ಸೇರಿದ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಅವರನ್ನು ಪ್ರಾರ್ಥನಾ ಸಭೆಗೆ ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿತು
Next Story





