Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ11 Jan 2016 11:27 PM IST
share

aÜáoáPÜá ÓÜᩪWÜÙÜá

ನಾಳೆ ಕ್ರೀಡಾ ನಿಲಯಗಳಿಗೆ ಆಯ್ಕೆ 
ಸುಳ್ಯ, ಜ.11: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಶಾಲೆ ಮತ್ತು ಕ್ರೀಡಾ ನಿಲಯಗಳಿಗೆ ಆಯ್ಕೆ ಪ್ರಕ್ರಿಯೆ ಜ.13ರಂದು ಸುಳ್ಯ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.
ಕ್ರೀಡಾ ಶಾಲೆಗೆ ಆಯ್ಕೆ ಬಯಸುವ ಕ್ರೀಡಾಪಟುಗಳು 7ನೆ ತರಗತಿಯಲ್ಲಿ ಓದುತ್ತಿದ್ದು, 1.6.2016ಕ್ಕೆ 14 ವರ್ಷ ಪ್ರಾಯ ಮೀರಬಾರದು. ಕ್ರೀಡಾನಿಲಯಗಳಿಗೆ ಆಯ್ಕೆ ಬಯಸುವ ಕ್ರೀಡಾಪಟುಗಳು 10ನೆ ತರಗತಿಯಲ್ಲಿ ಓದುತ್ತಿದ್ದು, 1.6.2016ಕ್ಕೆ 17 ವರ್ಷ ಪ್ರಾಯ ಮೀರಬಾರದು. ಜಿಪಂ ಕ್ರೀಡಾ ನಿಲಯಕ್ಕೆ ಆಯ್ಕೆ ಬಯಸುವ ಕ್ರೀಡಾಪಟುಗಳು 4ನೆ ತರಗತಿಯಲ್ಲಿ ಓದುತ್ತಿದ್ದು, 1.6.2016ಕ್ಕೆ 11 ವರ್ಷ ಪ್ರಾಯ ಮೀರಬಾರದು. ಮಾಹಿತಿಗೆ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆಯವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ


ಪುದು: ರಸ್ತೆ ಉದ್ಘಾಟನೆ
ಬಂಟ್ವಾಳ, ಜ.11: ಪುದು ಗ್ರಾಮದ ಫರಂಗಿಪೇಟೆ ರೈಲ್ವೆ ಟ್ರಾಕ್ ಬಳಿಯಿಂದ ಕುಂಪನಮಜಲುವರೆಗಿನ ಅಭಿವೃದ್ಧಿಪಡಿಸಿದ್ದ ಕಾಂಕ್ರೀಟ್ ರಸ್ತೆಯನ್ನು ಸಚಿವ ಯು.ಟಿ. ಖಾದರ್ ಉದ್ಘಾಟಿಸಿದರು. ಈ ಸಂದರ್ಭ ಪುದು ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಹಾಸಿರ್, ತಾಪಂ ಸದಸ್ಯ ಇಕ್ಬಾಲ್, ಮಾಜಿ ಜಿಪಂ ಸದಸ್ಯ ಫಾರೂಕ್, ಅಕ್ತಾರ್ ಹುಸೈನ್, ಝಹೀರ್, ಫೈಝಲ್, ಲತೀಫ್ ಉಪಸ್ಥಿತರಿದ್ದರು..

ಅಮೃತ ಯೋಜನೆಯಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಮಂಗಳೂರು, ಜ.11: ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಅಮೃತ ಯೋಜನೆಯಡಿಯಲ್ಲಿ ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಕಡುಬಡವರಿಗೆ ವಿಶೇಷವಾಗಿ ವಿಧವೆ, ಕೂಲಿ ಕಾರ್ಮಿಕರು ಸಂಕಷ್ಟಕ್ಕೊಳಗಾದ ಮಹಿಳೆಯರಿಗೆ ಸಾಮಾನ್ಯ, ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿ ಸಹಾಯಧನದಲ್ಲಿ ಹಾಸು ಖರೀದಿಸುವ ಯೋಜನೆ ಜಾರಿಯಲ್ಲಿದೆ. 2014-15ನೆ ಸಾಲಿನಲ್ಲಿ 27 ಜನರಿಗೆ ಅಮೃತ ಯೋಜನೆಯಡಿ ಅವಕಾಶವಿದೆ. ಪರಿಶಿಷ್ಟ ಜಾತಿಯ 10, ಪರಿಶಿಷ್ಟ ಪಂಗಡ 3, ಪರಿಶಿಷ್ಟ ವರ್ಗ 2ಎ, 3ಎ, 3 ಬಿ ಹಾಗೂ ಸಾಮಾನ್ಯ 14 ಮಂದಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ದ.ಕ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.


ಅಂಗನವಾಡಿ: ಅರ್ಜಿ ಆಹ್ವಾನ
ಮಂಗಳೂರು, ಜ.11: ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿಯಿರುವ ಬಡಗಕಜೆಕಾರು ಗ್ರಾಮದ ಮಿತ್ತಳಿಕೆ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಮಿತ್ತಳಿಕೆ (ಬಡಗಕಜೆಕಾರು), ಕುಂಪನಮಜಲು (ಪುದು), ಚೆನ್ನಯಕೋಡಿ (ಫಜೀರು), ಬಲ್ಯಾರಬೆಟ್ಟು (ಇರ್ವತೂತಿರು), ಜಕ್ರಿಬೆಟ್ಟು (ಪುರಸಭೆ ವಾರ್ಡ್ ನಂ.6), ಅರಳಕುಟ್ಟಿಕಳ (ರಾಯಿ), ಕಂಠಿಕ (ಬಾಳ್ತಿಲ), ನಿರಾರಿ (ಬಡಗಕಜೆಕಾರು), ಅಗರಗಂಡಿ (ಮಣಿನಾಲ್ಕೂರು) ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.ಜ.28ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಬಿ.ಇ.ಒ ಆಫೀಸಿನ ಬಳಿ, ಕೈಕುಂಜೆ, ಬಿ.ಸಿ ರೋಡ್ ದೂ.ಸಂ.: 232465 ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ನಾಳೆ ಸ್ವರ್ಣ ಮಹೋತ್ಸವ
 ಮಂಗಳೂರು, ಜ.11: ಬಜ್ಪೆ-ಕಟೀಲು ಸಮೀಪದ ಪೆರ್ಮುದೆಯ ಹುಣ್ಸೆಕಟ್ಟೆಯಲ್ಲಿ ಸಂತ ಸ್ನಾನಿಕ ಯೋಹಾನ್ನರಿಗೆ ಸಮರ್ಪಿಸಿದ ದೇವಾಲಯದ ಸ್ವರ್ಣ ಮಹೋತ್ಸವವು ಜ.13ರಂದು ನಡೆಯಲಿದೆ. ಚರ್ಚ್‌ನ ಯುವ ಧರ್ಮಗುರುಗಳಾದ ವಂ. ಎಡ್ವಿನ್ ವಿನ್ಸೆಂಟ್ ಕೊರೆಯಾರ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆಯೊಂದಿಗೆ ಸ್ವರ್ಣ ಮಹೋತ್ಸವದ ಸವಿನೆನಪಿಗಾಗಿ ಆರೋಗ್ಯನಿಧಿ, ಬಡ ಕುಟುಂಬವೊಂದಕ್ಕೆ ಉಚಿತ ಮನೆ ನಿರ್ಮಾಣ, ಸ್ಮರಣ ಸಂಚಿಕೆ ಬಿಡುಗಡೆ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ದೇವಾಲಯದಲ್ಲಿ ವಸ್ತ್ರ ನೀತಿ ಸಂಹಿತೆ ಜಾರಿಗೆ ಒತ್ತಾಯ
ಸುಬ್ರಹ್ಮಣ್ಯ, ಜ.11: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯ ಸೇರಿದಂತೆ ರಾಜ್ಯ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆಯ ಅಧೀನಕ್ಕೊಳಪಟ್ಟ ಎಲ್ಲಾ ದೇವಾಲಯಗಳಲ್ಲಿ ವಸ್ತ್ರ ನೀತಿ ಸಂಹಿತೆಯನ್ನು ಜಾರಿಗೊಳಿಸಬೇಕು ಎಂದು ರಾಜ್ಯ ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಭಾಸ್ಕರ ಬೆಂಡೋಡಿ ಒತ್ತಾಯಿಸಿದ್ದಾರೆ.
ದೇವರ ದರ್ಶನಕ್ಕಾಗಿ ದೇವಾಲಯ ಪ್ರವೇಶ ದ್ವಾರದಲ್ಲಿಯೇ ಸೂಕ್ತ ಮಾಹಿತಿ ವ್ಯವಸ್ಥೆ ಹಾಗೂ ಅಗತ್ಯ ಭದ್ರತಾ ಸಿಬ್ಬಂದಿ ನೇಮಕಗೊಳಿಸುವ ಮೂಲಕ ಸೂಕ್ತ ಮಾಹಿತಿ ಪಲಕಗಳನ್ನು ಅಳವಡಿಸಲು ದೇವಾಲಯಗಳು ಮುಂದಾಗಬೇಕು. ಧಾರ್ಮಿಕ ದತ್ತಿ ಮುಜರಾಯಿ ಇಲಾಖೆ ವಸ್ತ್ರ ನೀತಿ ಸಂಹಿತೆಯನ್ನು ಅಧಿಕೃತವಾಗಿ ಅಳವಡಿಸಿಕೊಂಡಿದ್ದರೂ ಯಾವುದೇ ದೇವಾಲಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ವಸ್ತ್ರ ನೀತಿ ಸಂಹಿತೆಗಳು ಜಾರಿಗೊಂಡಿರುವುದಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


ರಂಗ ಸಂಚಾರ ಕಾರ್ಯಕ್ರಮ 
ಮಂಗಳೂರು , ಜ.11: ಸಮುದಾಯ ಕರ್ನಾಟಕ ಮತ್ತು ಸಮುದಾಯ ಮಂಗಳೂರು ವತಿಯಿಂದ ನಗರದ ಬದ್ರಿಯಾ ಪದವಿ ಪೂರ್ವ ಕಾಲೇಜು ಬಯಲು ಅಂಗಳದಲ್ಲಿ ಫೆಲೆಸ್ತೀನ್ ಕುರಿತ ‘ಗೋಡೆಗೆ ಕಥೆ ಹೇಳಿ’ ಬೀದಿ ನಾಟಕ ಪ್ರದರ್ಶನಗೊಂಡಿತು.ಕಾಲೇಜಿನ ಪ್ರಾಂಶುಪಾಲ ಡಾ.ಇಸ್ಮಾಯೀಲ್ ಸ್ವಾಗತಿಸಿದರು. ಬದ್ರಿಯಾ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಪಿ.ಸಿ.ಎಂ.ಕುಂಞಿ, ಆಡಳಿತ ಮಂಡಳಿಯ ಸದಸ್ಯ ಪಿಸಿಎಂ ಹಾಶಿರ್ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಸಮುದಾಯ ಮಂಗಳೂರು ಸಂಘಟನೆಯ ಅಧ್ಯಕ್ಷ ಕೆ.ರಾಜೆಂದ್ರ ಉಡುಪ, ಕಾರ್ಯದರ್ಶಿ ವಾಸುದೇವ ಉಚ್ಚಿಲ್, ಕರ್ನಾಟಕ ಸಮುದಾಯ ರೆಪರ್ಟರಿಯ ದೇವೇಂದ್ರ ಗೌಡ ಎಸ್. ಸಿಂಧನೂರು ಮೊದಲಾದವರು ಉಪಸ್ಥಿತರಿದ್ದರು. ನಗರದ ಸೈಂಟ್ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಆಯ್ದ ಕನ್ನಡ ಕವಿತೆಗಳ ಕಾವ್ಯರಂಗ ದೃಶ್ಯ ರೂಪಕ ನಡೆಯಿತು.ನಿರಂಜರ ಚಿರಸ್ಮರಣೆ ಮತ್ತು ಮೃತ್ಯುಂಜಯ ಕಾದಂಬರಿ ಆಧಾರಿತ ನಾಟಕ ‘ಮೃತ್ಯುಂಜಯ’ ಡಾನ್ ಬಾಸ್ಕೋ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.

ಜ.14: ಮಹಾಚಂಡಿಕಾಯಾಗ
ಉಳ್ಳಾಲ, ಜ.11: ಉಳ್ಳಾಲ ಗ್ರಾಮದ ಶ್ರೀ ಕ್ಷೇತ್ರ ಒಂಭತ್ತುಕೆರೆಯಲ್ಲಿ ಜ.14ರಂದು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12ರ ವರೆಗೆ ಬ್ರಹ್ಮ ಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ಪುತ್ತೂರು ಇವರ ನೇತೃತ್ವದಲ್ಲಿ ಮಹಾಚಂಡಿಕಾ ಯಾಗ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಜ.14:ಅಭಿವೃದ್ಧಿ ಪ್ಯಾಕೇಜ್ ಸಭೆ
  ಕಾಸರಗೋಡು, ಜ.11: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಯೋಜನೆಗಳ ನಿರ್ವಹಣಾ ಪ್ರಗತಿ ಅವಲೋಕನಾ ಸಭೆಯು ಜ.14ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಮೂಳೂರು ಮರ್ಕಝ್‌ನಲ್ಲಿ ಮೀಲಾದುನ್ನಬಿ
ಮೂಳೂರು, ಜ.11: ದರ್ಸ್‌ಗಳಿಂದ ಮಾತ್ರ ನಿಜವಾದ ಧಾರ್ಮಿಕ ವಿದ್ಯೆಯ ಉಳಿವು ಸಾದ್ಯ. ಆದುದರಿಂದ ದರ್ಸ್‌ಗಳನ್ನು ಬೆಳೆಸಿ ಉಳಿಸುವುದು ಮುಸ್ಲಿಂ ಸಮುದಾಯದ ಕರ್ತವ್ಯವಾಗಿದೆ ಎಂದು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ, ಅಲ್-ಇಹ್ಸಾನ್ ಶರೀಅತ್ ಕಾಲೇಜ್‌ನ ಪ್ರಾಂಶುಪಾಲ ಅಲ್ಹಾಜ್ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಹೇಳಿದರು.
ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಅಧೀನ ಸಂಸ್ಥೆಯಾದ ಮೂಳೂರು ಮರ್ಕಝ್ ತಅಲೀಮಿಲ್ ಇಹ್ಸಾನ್‌ನಲ್ಲಿ ಪ್ರವಾದಿ (ಸ) ಜನ್ಮ ದಿನದ ಪ್ರಯುಕ್ತ ನಡೆದ ಮೀಲಾದುನ್ನಬಿ ದಿನಾಚರಣೆ ಮತ್ತು ಜಲಾಲಿಯ್ಯ ವಾರ್ಷಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಲ್ ಇಹ್ಸಾನ್ ಶರೀಅತ್ತ್ ಕಾಲೇಜಿನ ಪ್ರಧಾನ ಮುದರ್ರಿಸ್ ಪೂಂಜಾಲಕಟ್ಟೆ ಉಸ್ತಾದ್ ಮತ್ತು ಮುದರ್ರಿಸ್ ಸ್ವಾಬಿರ್ ಸಅದಿ ಮೌಲೂದು ಪಾರಾಯಣಕ್ಕೆ ನೇತೃತ್ವ ನೀಡಿದರು. ಗುಲಾಮ್ ರಬ್ಬಾನಿ ಕಟೀಹಾರ್ ಬಿಹಾರ ಮತ್ತು ಬಳಗದಿಂದ ನಅ ತೇ ಶರೀಫ್ ಮತ್ತು ಅಲ್ ಇಹ್ಸಾನ್ ಹಿಫ್ಲ್ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ನಡೆಯಿತು. ಜಲಾಲಿಯ್ಯಿದ ವಾರ್ಷಿಕದ ನೇತೃತ್ವವನ್ನು ಜಅಫರ್ ಸ್ವಾಧಿಕ್ ತಂಙಳ್ ಕುಂಬೋಳ್ ವಹಿಸಿದರು. ಅಬ್ದುಲ್ ಖಾದಿರ್ ಜಬ್ಬಾರ್ ಮಸ್ತಾನ್ ಉಪ್ಪಾಪ, ಅಸ್ಸೈಯ್ಯದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಅಸ್ಸ್ಸೈಯ್ಯದ್ ಇಬ್ರಾಹೀಂ ಅಲ್ ಖುರೈಶಿ ತಂಙಳ್ ಉಚ್ಚಿಲ, ಡಿಕೆಎಸ್ಸಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಅಲ್‌ಹಾಜ್ ಅಬ್ದುಲ್ ಅಝಿಝ್ ಆತೂರ್, ಡಿಕೆಎಸ್ಸಿ ಜುಬೈಲ್ ಘಟಕದ ಅಧ್ಯಕ್ಷ ಉಮರುಲ್ ಫಾರೂಕ್ ಕರ್ನಿರೆ, ಕೇಂದ್ರ ಸಮಿತಿ ಸದಸ್ಯ ಜಮಾಲ್ ಕನ್ನಂಗಾರ್, ಅಲ್ಹಾಜ್ ಅಬ್ದುರ್ರಹ್ಮಾನ್ ಮದನಿ, ಅಲ್‌ಹಾಜ್ ಅಹ್ಮದ್ ಖಾಸಿಮಿ, ಇಸ್‌ಹಾಕ್ ಫೈಝಿ, ಅಬ್ದುರ್ರಹ್ಮಾನ್ ಮದನಿ ಜೆಎಂ ಪಡುಬಿದ್ರಿ, ಅಶ್ರಫ್ ಸಖಾಫಿ, ಅಬ್ದುಲ್ ರಶೀದ್ ಸಖಾಫಿ, ಬದ್ರುದ್ದೀನ್ ಅಹ್ಸನಿ , ಎನ್. ಮುಹಮ್ಮದ್ ಶಬೀರ್ ಫೈಝಿ, ಅಬ್ದುಲ್ ಬಾರಿ ಮುಸ್ಲಿಯಾರ್ ಕೊಪ್ಪಲಂಗಡಿ, ಅಬ್ದುರ್ರಝಾಕ್ ಮಿಸ್ಬಾಹಿ, ಉಬೈದುಲ್ಲಾ ಝುಹ್‌ರಿ, ಮೌಲಾನಾ ಅಬುಲ್ ಹಸನ್ ರಝ್ವಿ, ಮುಫ್ತಿ ಮುಹಿಬ್ಬುಲ್ಲಾಹಿಲ್ ಖಾದ್ರಿ, ಮೌಲಾನಾ ಫಝೀಲತ್ ಹುಸೈನ್, ಮೌಲಾನಾ ಝುಲ್ಫಿಕಾರ್ ಮಿಸ್ಬಾಯಿ, ಸಂಸ್ಥೆಯ ಉಪಾಧ್ಯಕ್ಷರಾದ ಅಲ್ ಹಾಜಿ ಬದ್ರುದ್ದೀನ್ ಬಜ್ಪೆ, ಎಮ್‌ಎಚ್‌ಬಿ ಮುಹಮ್ಮದ್ , ಆಡಳಿತ ಸಮಿತಿ ಸದಸ್ಯರಾದ ವಿ. ಮುಹಮ್ಮದ್ ಬಜ್ಪೆ, ಅಬ್ದುಲ್ ಹಮೀದ್ ಅದ್ದು, ಎಂಜಿನಿಯರ್ ಸುಲೈಮಾನ್, ಡಿಕೆಎಸ್‌ಸಿ ಡೆವಲಪ್‌ಮೆಂಟ್ ಕಮಿಟಿ ಅಧ್ಯಕ್ಷ ಇಸ್‌ಹಾಕ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಂಸ್ಥೆಯ ಮ್ಯಾನೇಜರ್ ಮುಸ್ತಫ ಸಅದಿ ಸ್ವಾಗತಿಸಿದರು. ವೈ.ಬಿ.ಸಿ. ಬಶೀರ್‌ಅಲಿ ವಂದಿಸಿದರು. ಮುಹಮ್ಮದ್ ರಫೀಕ್ ಕನ್ನಂಗಾರ್ ಕಾರ್ಯಕ್ರಮ ನಿರೂಪಿಸಿದರು.

ಆಲಡ್ಕ: ಹುಬ್ಬುರ್ರಸೂಲ್ ಕಾರ್ಯಕ್ರಮ
ವಿಟ್ಲ, ಜ.11: ಆಲಡ್ಕ ಎಸ್ಕೆಎಸ್ಸೆಸೆಫ್ ವತಿಯಿಂದ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್
ನಲ್ಲಿ ಮೌಲಿದ್ ಆಚರಣೆ ಹಾಗೂ ಹುಬ್ಬುರ್ರಸೂಲ್ ಪ್ರಭಾಷಣ ಕಾರ್ಯಕ್ರಮ ನಡೆಯಿತು. ಶಾಖಾ ಉಪಾಧ್ಯಕ್ಷ ಹಾಜಿ ಪಿ.ಬಿ. ಹಾಮದ್ ಅಧ್ಯಕ್ಷತೆ ವಹಿಸಿದ್ದರು. ನೆಹರೂ ನಗರ ಮಸೀದಿಯ ಖತೀಬ್ ಶುಕೂರ್ ದಾರಿಮಿ ಸಂದೇಶ ಭಾಷಣಗೈದರು. ಈ ಸಂದರ್ಭ ಪಾಣೆಮಂಗಳೂರು ಎಸ್ಕೆಎಸ್ಸೆಸೆಫ್ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ಅಝೀಝ್ ಪಿ.ಐ., ಖಲೀಲ್ ದಾರಿಮಿ, ಅಬ್ದುಲ್ ಮಜೀದ್ ಬೋಗೋಡಿ, ಮುಹಮ್ಮದ್ ಹನೀಫ್ ಹಾಸ್ಕೋ, ಶಫೀಕ್ ಆಲಡ್ಕ, ಇಸ್ಹಾಕ್ ಪ್ಯಾಶನ್ವೇರ್, ಮುಹಮ್ಮದ್ ಹನೀಫ್ ಬೋಗೋಡಿ, ನಝೀರ್ ಫಿಶ್ ನಂದಾವರ, ರಫೀಕ್ ಇನೋಳಿ, ಎನ್. ಅಬ್ಬೊನಾಕ ನಂದಾವರ, ಎನ್. ಮೋನಾಕ ನಂದಾವರ, ಬಿ. ಮುಹಮ್ಮದ್, ನೌಶಾದ್ ಯು., ಯು. ಝುಬೈರ್ ಆಲಡ್ಕ, ಸುಲೈಮಾನ್ ಬೋಗೋಡಿ, ನೌಶಾದ್, ಸಿರಾಜ್ ಫೈಝಿ, ಝಾಹಿದ್ ಫೈಝಿ, ರಿಝ್ವಾನ್ ನೆಹರುನಗರ, ಶಾಕಿರ್ ಅಕ್ಕರಂಗಡಿ ಉಪಸ್ಥಿತರಿದ್ದರು

ಜ.15: ನವಕೇರಳ ಜಾಥಾಕ್ಕೆ ಚಾಲನೆ
 ಕಾಸರಗೋಡು, ಜ.11: ಸಿಪಿಎಂ ರಾಜ್ಯ ಸಮಿತಿ ವತಿಯಿಂದ ಪಾಲಿಟ್ ಬ್ಯುರೋ ಸದಸ್ಯ ಪಿಣರಾಯಿ ವಿಜಯನ್ ನೇತೃತ್ವದ ನವಕೇರಳ ಜಾಥಾಕ್ಕೆ ಜ.15ರಂದು ಸಂಜೆ 4 ಗಂಟೆಗೆ ಉಪ್ಪಳದಲ್ಲಿ ಸಿಪಿಎಂ ಹಿರಿಯ ಮುಖಂಡ ಪ್ರಕಾಶ್ ಕಾರಟ್ ಚಾಲನೆ ನೀಡುವರು.
  ಪ್ರತಿಪಕ್ಷ ನಾಯಕ ವಿ.ಎಸ್. ಅಚ್ಯುತಾನಂದನ್, ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ

ಜ.15: ಅನುಸ್ಮರಣೆ ಕಾರ್ಯಕ್ರಮ
ಉಳ್ಳಾಲ, ಜ.11: ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್ ಮೊಂಟೆಪದವು ಶಾಖೆಯ ವತಿಯಿಂದ ಜೀಲಾನಿ ಮತ್ತು ತಾಜುಲ್ ಉಲಮಾ ಅನುಸ್ಮರಣೆ ಜ.15ರಂದು ಮಗ್ರಿಬ್ ನಮಾಝ್ ಬಳಿಕ ಮೊಂಟೆಪದವು ಎಸ್ಸೆಸ್ಸೆಫ್ ಕಚೇರಿಯಲ್ಲಿ ನಡೆಯಲಿದೆ. ಸೈಯದ್ ಶಿಹಾಬುದ್ದೀನ್ ಅಲ್ ಮಶ್‌ಹೂರ್ ತಂಙಳ್ ತಲಕ್ಕಿ ನೇತೃತ್ವ ವಹಿಸಲ್ಲಿದ್ದು, ರಫೀಕ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಮಂಜನಾಡಿ ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಪಿ.ಎ.ಅಹ್ಮದ್ ಬಾಖವಿ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಪೇರಮೊಗ್ರು: ಮೆಹೆಫಿಲೆ ವೌಲಿದ್
ಮಾಣಿ, ಜ.11: ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಆಶ್ರಯದಲ್ಲಿ ಪೇರಮೊಗ್ರು ತಾಜುಲ್ ಉಲಮಾ ಕಾಟೇಜ್‌ನಲ್ಲಿ ಇತ್ತೀಚೆಗೆ ಮೆಹೆಫಿಲೆ ಮೌಲಿದ್ ಕಾರ್ಯಕ್ರಮ ನಡೆಯಿತು. ಕೆದಿಲ ಗ್ರಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಜಿ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ಪುತ್ತೂರು ಡಿವಿಜನ್ ಕಾರ್ಯದರ್ಶಿ ಸಿದ್ದೀಕ್ ಕಬಕ ಉದ್ಘಾಟಿಸಿದರು.
ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸದಸ್ಯ ಹನೀಫ್ ಸಖಾಫಿ, ಮಾಣಿ ದಾರುಲ್ ಇರ್ಶಾದ್ ನಿರ್ವಹಣಾ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಸಖಾಫಿ ಮಾಣಿ ಮುಖ್ಯ ಪ್ರಭಾಷಣಗೈಯ್ದರು. ಹಾಫಿಳ್ ಅನಸ್ ನೆಲ್ಯಾಡಿ ಸಂದೇಶ ಭಾಷಣ ಮಾಡಿದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷ ಹಾರಿಸ್ ಮದನಿ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಿತು. ಬಳಿಕ ಶಾಂತಿನಗರ ದರ್ಸ್ ವಿದ್ಯಾರ್ಥಿಗಳಿಂದ ಬುರ್ದಾ ಆಲಾಪನೆ ನಡೆಯಿತು. ಸಭೆಯಲ್ಲಿ ತಹ್ಲೀಲ್ ಸಮರ್ಪಿಸಲಾಯಿತು.
 ಎಸ್‌ವೈಎಸ್ ಸೂರಿಕುಮೇರ್ ನಿರ್ದೇಶಕ ಯೂಸುಫ್ ಹಾಜಿ, ಎಸ್ಸೆಸ್ಸೆಫ್ ಪುತ್ತೂರು ಡಿವಿಜನ್ ಕ್ಯಾಂಪಸ್ ಕಾರ್ಯದರ್ಶಿ ಶಫೀಕ್ ಈಶ್ವರಮಂಗಲ, ಎಸ್‌ವೈಎಸ್ ಬುಡೋಳಿ ಅಧ್ಯಕ್ಷ ಇಬ್ರಾಹೀಂ ಹಾಜಿ ಶೇರಾ, ಪೇರಮೊಗ್ರು ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಇಸ್ಮಾಯೀಲ್ ಹಾಜಿ ಕಲ್ಲಾಜೆ, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಮಾಜಿ ಕಾರ್ಯದರ್ಶಿ ಸ್ವಾದಿಕ್‌ಕಡಂಬು, ಎಸ್‌ವೈಎಸ್ ಪೆರ್ನೆ ಸೆಂಟರ್ ಪ್ರಮುಖರಾದ ಹನೀಫ್ ಮುಸ್ಲಿಯಾರ್, ಹಮೀದ್ ಮತ್ತಿತರರು ಪಾಲ್ಗೊಂಡಿದ್ದರು.
ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಗಡಿಯಾರ್ ಕಾರ್ಯಕ್ರಮ ನಿರೂಪಿಸಿದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಕೋಶಾಧಿಕಾರಿ ಅಶ್ರಫ್ ಜಿ.ಎಂ. ಸ್ವಾಗತಿಸಿದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಕಾರ್ಯದರ್ಶಿ ಸಲೀಮ್ ಮಾಣಿ ವಂದಿಸಿದರು.


ಬಟ್ಟಪ್ಪಾಡಿ: ಮೀಲಾದ್ 
ಜಲ್ಸಾ ಉಚ್ಚಿಲ, ಜ.11:ಬಟ್ಟಪ್ಪಾಡಿ ಖಿಳ್‌ರಿಯಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಮ್ ಮದ್ರಸದ ಆಶ್ರಯದಲ್ಲಿ ಮೀಲಾದ್ ಜಲ್ಸಾ ಹಾಗೂ ಸ್ವ್ವಲಾತ್ ವಾರ್ಷಿಕೋತ್ಸವ ನಡೆಯಿತು. ಕಾರ್ಯಕ್ರಮಕ್ಕೆ ಶರಫುದ್ದೀನ್ ತಂಙಳ್ ಕೊಡಗು ನೇತೃತ್ವ ನೀಡಿದರು. ಕೆ.ಸಿ. ರೋಡ್ ಹುಸೈನ್ ಸಅದಿ ಮುಖ್ಯ ಪ್ರಭಾಷಣ ಮಾಡಿದರು. ಇಬ್ರಾಹೀಂ ಮದನಿ, ಅಹ್ಮದ್ ಕುಂಞಿ, ಯು.ಬಿ. ಮುಹಮ್ಮದ್ ಹಾಜಿ ಪಾಲ್ಗೊಂಡಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X