ಕೈಗಾದಲ್ಲಿ ಬರ್ಡ್ ಮ್ಯಾರಥಾನ್

ಕಾರವಾರ, ಜ. 11: ಕೈಗಾದಲ್ಲಿ ನಡೆದ ಆರನೆ ‘ಕೈಗಾ ಬರ್ಡ್ ಮ್ಯಾರಥಾನ್’ದಲ್ಲಿ ಅತೀ ಅಪರೂಪದ ಇಂಡಿಯನ್ ವಲ್ಚರ್ ಸೇರಿ ಒಟ್ಟು 20 ಹೊಸ ಪಕ್ಷಿಗಳು ಪತ್ತೆಯಾಗಿದೆ. ಪಕ್ಷಿ ಗಣತಿ ಉದ್ಘಾಟಿಸಿ ಕೈಗಾ ನಿರ್ದೇಶಕ ಎಚ್. ಎನ್. ಭಟ್ ಮಾತನಾಡಿ, ಪರಿಸರಕ್ಕೆ ಪೂರಕವಾಗಿ ವಿದ್ಯುತ್ ಶಕ್ತಿ ಉತ್ಪಾದಿಸಲು ಕೈಗಾ ಕಟಿಬದ್ಧವಾಗಿದೆ. ಕೈಗಾದಲ್ಲಿ ಪ್ರತಿವರ್ಷದ ಗಣತಿಯಲ್ಲಿ ಪಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬಂದಿದೆ ಎಂದರು. ಈ ಸಂದರ್ಭದಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಮುಖ್ಯಸ್ಥ ರಾಜು ಕಸುಂಬೆ, ಕೈಗಾ ಒಂದು ಹಾಗೂ ಎರಡನೆ ಘಟಕದ ಸಂಜಯಕುಮಾರ್ ಕೈಗಾದ ಮೂರು ಹಾಗೂ ನಾಲ್ಕನೆ ಘಟಕದ ನಿರ್ದೇಶಕ ಎಂ. ಪಿ. ಹನ್ಸೋರಾ, ಕೈಗಾ ಮೂರು, ನಾಲ್ಕು ಘಟಕದ ಮುಖ್ಯ ಅಧೀಕ್ಷಕ ಕೆ. ಕೆ. ಬಜಾಜ್, ಕೈಗಾ ಬರ್ಡ್ ಮ್ಯಾರಾಥಾನ್ ಆಯೋಜನಾ ಸಮಿತಿಯ ಮುಖ್ಯಸ್ಥ ಟಿ. ಪ್ರೇಮಕುಮಾರ್ ಉಪಸ್ಥಿತರಿದ್ದರು. ಹೊಸ ಪ್ರಭೇದ: ಬೆಳಗ್ಗೆ 5:30ಕ್ಕೆ ಆರಂಭ ಗೊಂಡ ಬರ್ಡ್ ಮ್ಯಾರಥಾನ್‌ನಲ್ಲಿ ಕೈಗಾ ಉದ್ಯೋಗಿಗಳು, ಶಿರಸಿ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಕಾರ್ಯಕರ್ತರು ಭಾಗವಹಿಸಿದ್ದರು. ಕರ್ನಾಟಕದ ಸೇರಿದಂತೆ ಗೋವಾ, ಮುಂಬಯಿ, ಕೇರಳದ ಒಟ್ಟು 150 ಪಕ್ಷಿ ವೀಕ್ಷಕರು ಆಗಮಿಸಿದ್ದರು. ಕೈಗಾದಲ್ಲಿ ನಡೆದ ಪಕ್ಷಿ ಗಣತಿಯಲ್ಲಿ ವಿನಾಶದ ಅಂಚಿನಲ್ಲಿರುವ ಇಂಡಿಯನ್ ವಲ್ಚರ್ ಎಂಬ ಪಕ್ಷಿ ಕಂಡು ಬಂದಿತು. ಕಳೆದ ಐದು ವರ್ಷಗಳ ಸಮೀಕ್ಷೆಯಲ್ಲಿ ಒಟ್ಟು 245 ಪ್ರಬೇದದ ಹೊಸ ಪಕ್ಷಿಗಳು ಕಂಡು ಬಂದಿದ್ದು, ಈ ಬಾರಿ 20 ಹೊಸ ಪ್ರಭೇದ ಕಂಡು ಬಂದವು. ಹೀಗಾಗಿ ಅವುಗಳ ಸಂಖ್ಯೆ 265ಕ್ಕೆ ಏರಿದೆ. ಲಾಗ್ಗರ್ ಪಾಲ್ಕಾನ್, ಸೀಲೋನ ಪ್ರಾಗವೌ
ತ್, ಜೆರ್ಡಾನ್ಸ್ಸ್ ನೈಟರಝಾರ್, ಗ್ರೀನ್ ವಾಬ್ರ್ಲರ್, ಹ್ಯೂಮ್ಸ ವಾಬ್ರ್ಲರ್, ಓರಿಯೆಂಟಲ್ ಡ್ವಾರ್ಫ ಕಿಂಗಫಿಶರ್, ಸ್ಮಾಲ್ ಇಂಡಿನ್ ಪ್ರಾಂಟಿಕೋಲ್, ರಿವರ್ ಟರ್ನ್, ಟಾವ್ನಿ ಬೆಲ್ಲಿಡ ಬಾಬ್ಲರ್, ಟಾವ್ನಿ ಪಿಪಿಟ, ಬ್ರೌನ್ ಬಾಕಡ ನೀಡಲ್ಟೇಲ್, ಝಿಟ್ಟಿಂಗ್ ಸಿಸ್ಟಿಕೋಲಾ, ಸ್ಪಾಂಗಲ್ಡ್ ಡ್ರಾಂಗೋ, ಸ್ಪಾಟ್ಟೆಡ್ ಓವಲೆಟ್, ಇಂಡಿಯನ್ ಸ್ಪಾಟ್ಟೆಡ್ ಈಗಲ್, ಗ್ರೇಟರ್ ಶಾಟ್ ಟೋವಡ್ ಲಾರ್ಕ್, ಪ್ಯಾಸಿಫಿಕ್ ಗೋಲ್ಡನ್ ಪ್ಲಾವರ್, ಸದರ್ನ್ ಗ್ರೇ ಶ್ರೈಕ್, ಯೆಲ್ಲೊ ವಾಟಲ್ಡ್ ಲಾಪವಿಂಗ್ ಪ್ರಭೆೇದದ ಪಕ್ಷಿಗಳು ಹೊಸದಾಗಿ ಪತ್ತೆಯಾಗಿದೆ.







