ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಕಠಿಣ ಶಿಕ್ಷೆ: ಸಂಸತ್ತಿಗೆ ಸುಪ್ರೀಂ ಸಲಹೆ

ಹೊಸದಿಲ್ಲಿ, ಜ.11: ಮಕ್ಕಳ ಮೇಲೆ ಅತ್ಯಾಚಾರ ಹಾಗೂ ದೌರ್ಜನ್ಯ ನಡೆಸಿದ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುವ ಬಗ್ಗೆ ಚಿಂತನೆ ನಡೆಸುವಂತೆ ಸುಪ್ರೀಂಕೋರ್ಟ್ ಸಂಸದರಿಗೆ ಸಲಹೆ ನೀಡಿದೆ. ಅತ್ಯಾಚಾರದ ಪ್ರಸಂಗದಲ್ಲಿ ‘ಮಗು’ ಎಂಬುದನ್ನು ವ್ಯಾಖ್ಯಾನಿಸುವ ಬಗೆ ಸಂಸತ್ತು ಯೋಚಿಸುವುದು ಅಗತ್ಯವಾಗಬಹುದೆಂದೂ ಅದು ಹೇಳಿದೆ.
ಮಕ್ಕಳ ಮೇಲೆ ದೌರ್ಜನ್ಯ ನಡೆಸುವ ಅಪರಾಧಿಗಳ ಪುರುಷತ್ವ ಹರಣ ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ನ ವಕೀಲೆಯರ ಸಂಘಟನೆಯು (ಎಸ್‌ಸಿಡಬ್ಲುಎಲ್‌ಎ) ಸಲ್ಲಿಸಿದ್ದ ಮನವಿಯೊಂದರ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯಕ್ಕೆ ಬಂದಿದೆ. ಇಂತಹ ಹೀನ ಅಪರಾಧಿಗಳಿಗೆ ಕೇವಲ ಪುರುಷತ್ವ ಹರಣದಷ್ಟೇ ಪರಿಣಾಮಕಾರಿ ತಡೆಯಾಗಬಹುದೆಂದು ಮನವಿ ಪ್ರತಿಪಾದಿಸಿದೆ.
Next Story





