ಫುಟ್ಬಾಲ್ ಆಟಗಾರರ ಬಸ್ ನದಿಗೆ: 16 ಸಾವು
ಕೋಟ್ಝಕೋಲ್ಕಸ್, ಜ. 11: ಪೂರ್ವ ಮೆಕ್ಸಿಕೊದಲ್ಲಿ ಹವ್ಯಾಸಿ ಫುಟ್ಬಾಲ್ ಆಟಗಾರರು ಮತ್ತು ಅಭಿಮಾನಿಗಳನ್ನು ಸಾಗಿಸುತ್ತಿದ್ದ ಬಸ್ಸೊಂದು ನದಿಯೊಂದಕ್ಕೆ ಉರುಳಿಬಿದ್ದ ದುರಂತದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ ಹಾಗೂ 10 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ವೆರಕ್ರಝ್ ರಾಜ್ಯದ ಅಟೊಯಾಕ್‌ನಲ್ಲಿ ದುರಂತ ನಡೆದಿದ್ದು, ಬಸ್‌ನ ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು.
ಫುಟ್ಬಾಲ್ ಪಂದ್ಯವೊಂದರಲ್ಲಿ ಆಡುವುದಕ್ಕಾಗಿ ಈ ಆಟಗಾರರನ್ನು ಬಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು.
Next Story