ದೇವಸಾ್ಥನಗಳಲ್ಲಿ ವಸ್ತ್ರ ಸಂಹಿತೆಗೆ ಮದ್ರಾಸ್ ಹೆಕೋರ್ಟ್ ತಾತಾ್ಕಲಿಕ ತಡೆ
ಚೆನ್ನೈ, ಜ.11: ತಮಿಳುನಾಡಿನ ದೇವಸ್ಥಾನಗಳಿಗೆ ಪ್ರವೇಶಿಸುವ ಭಕ್ತರಿಗೆ ವಸ್ತ್ರ ಸಂಹಿತೆ ವಿಧಿಸಿರುವ ಆದೇಶವೊಂದಕ್ಕೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಸೋಮವಾರ ಮಧ್ಯಾಂತರ ತಡೆಯಾಜ್ಞೆ ನೀಡಿದೆ.
ದೇವಸ್ಥಾನಗಳನ್ನು ಸಂದರ್ಶಿಸುವವರಿಗೆ ವಸ್ತ್ರ ಸಂಹಿತೆ ಹೇರುವುದು ಸಾಧ್ಯವಾಗದೆಂದು ವಾದಿಸಿ, ಸರಕಾರ ಸಲ್ಲಿಸಿದ್ದ ರಿಟ್ ಮೇಲ್ಮನವಿಗೆ ಸಂಬಂಧಿಸಿ ನ್ಯಾಯಪೀಠ ಈ ತಡೆಯಾಜ್ಞೆ ವಿಧಿಸಿದೆ.
ಮದ್ರಾಸ್ ಹೈಕೋರ್ಟ್‌ನ 2015ರ ಡಿಸೆಂಬರ್‌ನ ಆದೇಶದನ್ವಯ, ಹೊಸ ವಸ್ತ್ರ ಸಂಹಿತೆ ಅನುಸರಿಸುವಂತೆ ರಾಜ್ಯದ ಅನೇಕ ಪ್ರಮುಖ ದೇವಾಲಯಗಳಲ್ಲಿ ಸೂಚನಾ ಫಲಕಗಳನ್ನು ಹಾಕಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಳನಿ ದೇವಾಲಯದ ಹೊರಗೆ ಹಾಕಲಾಗಿರುವ ಸೂಚನಾ ಫಲಕದಲ್ಲಿ ಪುರುಷರು ಧೋತಿ, ಅಂಗಿ, ಪೈಜಾಮ ಅಥವಾ ಪ್ಯಾಂಟ್-ಶರ್ಟ್ ಹಾಗೂ ಮಹಿಳೆಯರು ಹಾಗೂ ಹುಡುಗಿಯರು ಸೀರೆ, ಚೂಡಿದಾರ ಅಥವಾ ಹಾಫ್ ಸಾರಿಯೊಂದಿಗೆ ಪಾವಡಾಯಿ ಧರಿಸಬೇಕೆಂದು ತಿಳಿಸಲಾಗಿದೆ. ಲುಂಗಿ, ಬರ್ಮುಡಾ, ಜೀನ್ಸ್ ಹಾಗೂ ಟೈಟ್ ಲೆಗ್ಗೀನ್‌ಗಳಿಗೆ ಅವಕಾಶವಿಲ್ಲವೆನ್ನಲಾಗಿದೆ.
Next Story





