ತಾಜುಲ್ ಉಲಮಾ ಉರೂಸ್‌ಗೆ ಉಳ್ಳಾಲದಲ್ಲಿ ಚಾಲನೆ

ಉಳ್ಳಾಲ, ಜ.11: ತಾಜುಲ್ ಉಲಮಾ ಅಸ್ಸೈಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್‌ರ 2ನೆ ಉರೂಸ್‌ಗೆ ಉಳ್ಳಾಲ ಸೈಯದ್ ಮದನಿ ದರ್ಗಾ ಝಿಯಾರತ್‌ನೊಂದಿಗೆ ಸೋಮವಾರ ಚಾಲನೆ ದೊರೆಯಿತು.
ಕೆ.ಎಸ್.ಆಟಕ್ಕೋಯ ತಂಙಳ್ ಉರೂಸ್ ಧ್ವಜವನ್ನು ಸಮಿ ತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿಯವರಿಗೆ ಹಸ್ತಾಂತರಿಸುವ ಮೂಲಕ ಉರೂಸ್‌ಗೆ ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭ ಸೈಯದ್ ಚೆರುಕುಂಞಿ ತಂಙಳ್, ಸೈಯದ್ ಪೂಕೋಯ ತಂಙಳ್ ಕುಂಬೋಳ್, ಸೈಯದ್ ಹಬೀಬುಲ್ಲ ತಂಙಳ್ ಪೆರುವಾಯಿ, ಬೇಕಲ ಇಬ್ರಾಹೀಂ ಮುಸ್ಲಿಯಾರ್, ಅಬ್ಬಾಸ್ ಉಸ್ತಾದ್ ಮಂಜನಾಡಿ, ಅಬ್ದುಲ್ ಹಮೀದ್ ಉಸ್ತಾದ್ ಮಾಣಿ, ಅಹ್ಮದ್ ಬಾವ ಉಸ್ತಾದ್, ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಹಾಜಿ ಯು.ಎಸ್.ಹಂಝ, ಯು.ಟಿ.ಇಲ್ಯಾಸ್, ಬಿಲಾಲ್ ಮುಹಮ್ಮದ್ ಹಾಜಿ, ಮುಹಮ್ಮದ್ ಅಶ್ರಫ್ ಹಾಜಿ, ಫಾರೂಕ್ ಮಾರ್ಗತಲೆ, ಜೆ.ಅಬ್ದುಲ್ ಹಮಿದ್, ಹನೀಫ್ ಹಾಜಿ, ನಾಝಿಮ್, ಝಿಯಾದ್ ತಂಙಳ್, ತಂಝೀಲ್, ಯು.ಕೆ.ಮೋನು ಹಾಜಿ ಕಣಚೂರು, ಎಚ್.ಎಚ್.ಉಂಞಿ ಹಾಜಿ ದೇರಳಕಟ್ಟೆ, ಶಾಕಿರ್ ಹಾಜಿ ಹೈಷುಂ ಕಣ್ಣೂರ್, ಹಾಜಿ ಹೈದರ್ ಪರ್ತಿಪ್ಪಾಡಿ, ಇಬ್ರಾಹೀಂ ಬಾವ ಹಾಜಿ, ಗುಲಾಮ್ ಅಹ್ಮದ್ ಹಾಜಿ ಕನ್ನಂಗಾರ್, ಅಬೂಬಕರ್ ಹಾಜಿ ಪಟ್ಟಾಡಿ, ಎಸ್.ಕೆ. ಖಾದರ್ ಹಾಜಿ, ಲಂಡನ್ ಮುಹಮ್ಮದ್ ಹಾಜಿ, ಪಿ.ಅಬ್ದುಲ್ಲಾ ಮುಸ್ಲಿಯಾರ್ ಉಪ್ಪಳ ಹಾಗೂ ಉಳ್ಳಾಲ ಸೈಯದ್ ಮದನಿ ದರ್ಗಾ ಮತ್ತು ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.
ಪಲ್ಲಂಗೋಡ್ ಅಬ್ದುಲ್ ಖಾದರ್ ಮದನಿ ಸ್ವಾಗತಿಸಿದರು. ಆರ್.ಕೆ.ರಫೀಕ್ ಮದನಿ ಅಮ್ಮೆಂಬಳ ವಂದಿಸಿದರು.





