ಕೊರಿಯದಲ್ಲಿ ಯುದ್ಧ ಸಲಕರಣೆಗಳ ನಿಯೋಜನೆಗೆ ಅಮೆರಿಕ ನಿರ್ಧಾರ
ಸಿಯೋಲ್, ಜ. 11: ಉತ್ತರ ಕೊರಿಯ ಇತ್ತೀಚೆಗೆ ನಡೆಸಿದ ಪರಮಾಣು ಪರೀಕ್ಷೆಯ ಹಿನ್ನೆಲೆಯಲ್ಲಿ ಕೊರಿಯ ಪರ್ಯಾಯ ದ್ವೀಪದಲ್ಲಿ ಇನ್ನಷ್ಟು ‘‘ಆಯಕಟ್ಟಿನ ಸೊತ್ತು’’ಗಳನ್ನು ನಿಯೋಜಿಸಬಹುದಾಗಿದೆ ಎಂದು ದಕ್ಷಿಣ ಕೊರಿಯ ಸೋಮವಾರ ಹೇಳಿದೆ.
ಇತ್ತೀಚೆಗಷ್ಟೇ, ಉತ್ತರ ಕೊರಿಯ ಪರಮಾಣು ಪರೀಕ್ಷೆಗೆ ಪ್ರತಿಯಾಗಿ ಅಮೆರಿಕದ ಬಿ-52 ಯುದ್ಧ ವಿಮಾನವೊಂದು ಹಾರಾಟ ನಡೆಸಿದ್ದನ್ನು ಸ್ಮರಿಸಬಹುದಾಗಿದೆ.
ಉತ್ತರ ಕೊರಿಯದ ಗಡಿಯಿಂದ ಕೆಲವು ಕಿಲೋಮೀಟರ್‌ಗಳ ಒಳಗೆ ಉಭಯ ದೇಶಗಳು ಜಂಟಿಯಾಗಿ ನಡೆಸುವ ಕೇಸಂಗ್ ಕೈಗಾರಿಕಾ ಪಾರ್ಕ್‌ಗೆ ಹೋಗುವ ತನ್ನ ಪ್ರಜೆಗಳ ಚಲನವಲನಗಳ ಮೇಲೂ ಸಿಯೋಲ್ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಿದೆ.
ಬುಧವಾರದ ಪರೀಕ್ಷೆಯ ಬಳಿಕ ದಕ್ಷಿಣ ಕೊರಿಯ ಹಲವಾರು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದೆ. ಉತ್ತರ ಕೊರಿಯದ ಮೇಲೆ ಕಠಿಣ ಆರ್ಥಿಕ ದಿಗ್ಬಂಧನೆಗಳನ್ನು ವಿಧಿಸುವಂತೆ ಅದು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ.
Next Story